Loading..!

ಭಾರತೀಯ ನೌಕಾಪಡೆಯಲ್ಲಿ 260 ಆಫೀಸರ್ ಹುದ್ದೆಗಳ ನೇಮಕಾತಿ: ಪದವೀಧರರಿಗೆ ಸುವರ್ಣ ಅವಕಾಶ; ಇಂದೇ ಅರ್ಜಿ ಸಲ್ಲಿಸಿ!
Published by: Heena Sheregar | Date:14 ಜನವರಿ 2026
not found

        ಸರ್ಕಾರಿ ಹುದ್ದೆಯನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸಿಹಿ ಸುದ್ದಿ ನಿಮಗಾಗಿಯೇ. ಭಾರತೀಯ ನೌಕಾಪಡೆ ನೇಮಕಾತಿ 2026 ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಭಾರತಾದ್ಯಾಂದ್ಯಂತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. 


        ಭಾರತೀಯ ನೌಕಾಪಡೆಯು 2027ರ ಜನವರಿ ಬ್ಯಾಚ್‌ಗಾಗಿಶಾರ್ಟ್ ಸರ್ವಿಸ್ ಕಮಿಷನ್ (SSC) ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 260ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಫೆಬ್ರವರಿ 2026.


       ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಭಾರತೀಯ ನೌಕಾಪಡೆ ನೇಮಕಾತಿ 2026 ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!

📌ಭಾರತೀಯ ನೌಕಾಪಡೆ ನೇಮಕಾತಿ ಹುದ್ದೆಯ ಅಧಿಸೂಚನೆ

🧑‍🎓
ಹುದ್ದೆಗಳ ವಿವರ (Branch-wise Vacancies)
ಒಟ್ಟು 260 ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
ಜನರಲ್ ಸರ್ವಿಸ್ (GS-X) / ಹೈಡ್ರೋ : 76                         
ಪೈಲಟ್ (Pilot) : 25                         
ನೇವಲ್ ಏರ್ ಆಪರೇಷನ್ಸ್ ಆಫೀಸರ್ : 20                         
ಏರ್ ಟ್ರಾಫಿಕ್ ಕಂಟ್ರೋಲರ್ (ATC) :  18                         
ಲಾಜಿಸ್ಟಿಕ್ಸ್ (Logistics) : 10                         
ಶಿಕ್ಷಣ (Education) : 07                       
ಇಂಜಿನಿಯರಿಂಗ್ (GS) :  42
ಎಲೆಕ್ಟ್ರಿಕಲ್ (GS) : 38
ಸಬ್‌ಮೆರಿನ್ ಟೆಕ್ (ಇಂಜಿನಿಯರಿಂಗ್) : 08
ಸಬ್‌ಮೆರಿನ್ ಟೆಕ್ (ಎಲೆಕ್ಟ್ರಿಕಲ್) : 08



🎓ಶೈಕ್ಷಣಿಕ ಅರ್ಹತೆ (Educational Qualification) :"ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ. 60 ಅಂಕಗಳೊಂದಿಗೆ ಬಿ.ಇ, ಬಿ.ಟೆಕ್, ಎಂಬಿಎ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು; ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ."

⏳ ವಯೋಮಿತಿ (Age Criteria):
GS(X) / ಇಂಜಿನಿಯರಿಂಗ್ / ಎಲೆಕ್ಟ್ರಿಕಲ್: 02 ಜನವರಿ 2002 ರಿಂದ 01 ಜುಲೈ 2007.
ಪೈಲಟ್ / ಅಬ್ಸರ್ವರ್: 02 ಜನವರಿ 2003 ರಿಂದ 01 ಜನವರಿ 2008.
ಶಿಕ್ಷಣ / ATC: 02 ಜನವರಿ 2002 ರಿಂದ 01 ಜನವರಿ 2006.

💰 ವೇತನ ಮತ್ತು ಸೌಲಭ್ಯಗಳು (Salary & Perks)
ಮಾಸಿಕ ವೇತನ: ಆರಂಭಿಕವಾಗಿ ಸುಮಾರು ₹1,25,000 (ಮೂಲ ವೇತನ ₹56,100 + ಡಿಎ + ಮಿಲಿಟರಿ ಸೇವಾ ವೇತನ + ಭತ್ಯೆಗಳು).

ಸೌಲಭ್ಯಗಳು:
ಉಚಿತ ವೈದ್ಯಕೀಯ ಸೇವೆ, ರಜೆ ಪ್ರಯಾಣ ರಿಯಾಯಿತಿ (LTC), ಕ್ಯಾಂಟೀನ್ ಸೌಲಭ್ಯ (CSD), ವಿಮೆ ರಕ್ಷಣೆ ಮತ್ತು ದೇಶಾದ್ಯಂತ ಗೌರವಯುತ ಜೀವನ.

🎯ಆಯ್ಕೆ ಪ್ರಕ್ರಿಯೆ (Selection Process)
ಶಾರ್ಟ್‌ಲಿಸ್ಟಿಂಗ್: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಪದವಿ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.
SSB ಸಂದರ್ಶನ: ಬೆಂಗಳೂರು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ 5 ದಿನಗಳ ಕಾಲ ವ್ಯಕ್ತಿತ್ವ ಮತ್ತು ಬುದ್ಧಿಮತ್ತೆ ಪರೀಕ್ಷೆ ನಡೆಯುತ್ತದೆ.
ವೈದ್ಯಕೀಯ ಪರೀಕ್ಷೆ: SSB ಪಾಸಾದ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಇರುತ್ತದೆ.
ಮೆರಿಟ್ ಪಟ್ಟಿ: ಅಂತಿಮವಾಗಿ ಶ್ರೇಯಾಂಕದ ಆಧಾರದ ಮೇಲೆ ನೇಮಕಾತಿ ಆದೇಶ ನೀಡಲಾಗುತ್ತದೆ.

📝 ಅರ್ಜಿ ಸಲ್ಲಿಸುವ ವಿಧಾನ :
1. ಭಾರತೀಯ ನೌಕಾಪಡೆಯ ಅಧಿಕೃತ ಜಾಲತಾಣ : https://bit.ly/4jAx138 ಗೆ ಭೇಟಿ ನೀಡಿ.
2. ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಬಳಸಿ ನೋಂದಣಿ (Register) ಮಾಡಿಕೊಳ್ಳಿ.
3. ಲಾಗಿನ್ ಆದ ನಂತರ 'Current Opportunities' ವಿಭಾಗದಲ್ಲಿರುವ ಆಫೀಸರ್ ಹುದ್ದೆಯ ಲಿಂಕ್ ಕ್ಲಿಕ್ ಮಾಡಿ.
4. ಅಗತ್ಯವಿರುವ ಶೈಕ್ಷಣಿಕ ದಾಖಲೆಗಳು, ಭಾವಚಿತ್ರ ಮತ್ತು ಸಹಿಯ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಿ.
5. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ 'Submit' ನೀಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಪಡೆದುಕೊಳ್ಳಿ.

📅 ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 24 ಜನವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಫೆಬ್ರವರಿ 2026

ಗಮನಿಸಿ: ಈ ಉದ್ಯೋಗದ ಬಗ್ಗೆ ಯಾವುದೇ ಫೀಸ್ ಇಲ್ಲದಿರುವುದರಿಂದ, ಅರ್ಹವಿರುವ ಎಲ್ಲಾ ಯುವಕ-ಯುವತಿಯರು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಿ.

📌 ಇಂತಹ ಉದ್ಯೋಗ ಸುದ್ದಿಗಳಿಗಾಗಿ KPSCVaani ಜೊತೆ ಸಂಪರ್ಕದಲ್ಲಿರಿ.


Application End Date:  24 ಫೆಬ್ರುವರಿ 2026
To download official notification

Comments