IBPS ನಿಂದ ಒಟ್ಟು 10,368 ಕಚೇರಿ ಸಹಾಯಕ, ವ್ಯವಸ್ಥಾಪಕ ಮತ್ತು ಅಧಿಕಾರಿ ಸೇರಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Hanamant Katteppanavar | Date:10 ಜೂನ್ 2021

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ನೇಮಕ ಮಾಡುವ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ಯಿಂದ ಒಟ್ಟು 10,368 ಖಾಲಿ ಇರುವ (CRP RRB X) ಹುದ್ದೆಗಳಾದ ಕಚೇರಿ ಸಹಾಯಕ, ಸಹಾಯಕ ವ್ಯವಸ್ಥಾಪಕ, ಜನರಲ್ ಬ್ಯಾಂಕಿಂಗ್ ಅಧಿಕಾರಿ, ಮಾಹಿತಿ ತಂತ್ರಜ್ಞಾನ ಅಧಿಕಾರಿ, ಚಾರ್ಟೆಡ್ ಅಕೌಂಟೆಂಟ್, ಕಾನೂನು ಅಧಿಕಾರಿ, ಖಜಾನೆ ವ್ಯವಸ್ಥಾಪಕ, ಮಾರ್ಕೆಟಿಂಗ್ ಆಫೀಸರ್, ಕೃಷಿ ಅಧಿಕಾರಿ ಮತ್ತು ಇತರೆ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಜೂನ್, 28, 2021 ಕ್ಕೆ ಕೊನೆಗೊಳ್ಳುತ್ತದೆ.
* ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08-06-2021.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-06-2021.
- ಪ್ರಾಥಮಿಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಆಗಸ್ಟ್, 2021.
- ಪ್ರಾಥಮಿಕ ಪರೀಕ್ಷೆಯ ಫಲಿತಾಂಶಗಳ ಘೋಷಣೆಯ ದಿನಾಂಕ: ಸೆಪ್ಟೆಂಬರ್ 2021.
- ಆನ್‌ಲೈನ್ ಪ್ರಥಮ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಸೆಪ್ಟೆಂಬರ್ / ಅಕ್ಟೋಬರ್ 2021.
- ಫಲಿತಾಂಶದ ಘೋಷಣೆಯ ದಿನಾಂಕ: ಅಕ್ಟೋಬರ್ 2021.
- ಸಂದರ್ಶನ ಮತ್ತು ಸಂದರ್ಶನಕ್ಕಾಗಿ ಕರೆ ಪತ್ರಗಳನ್ನು ಡೌನ್‌ಲೋಡ್ ಮಾಡುವ ದಿನಾಂಕ: ಅಕ್ಟೋಬರ್ / ನವೆಂಬರ್ 2021.
* ಹುದ್ದೆಗಳ ವಿವರ:
- ಕಚೇರಿ ಸಹಾಯಕ - 5134 ಹುದ್ದೆಗಳು.
- ಸಹಾಯಕ ವ್ಯವಸ್ಥಾಪಕ - 3922 ಹುದ್ದೆಗಳು.
- ಜನರಲ್ ಬ್ಯಾಂಕಿಂಗ್ ಅಧಿಕಾರಿ (ವ್ಯವಸ್ಥಾಪಕ) - 906 ಹುದ್ದೆಗಳು.
- ಮಾಹಿತಿ ತಂತ್ರಜ್ಞಾನ ಅಧಿಕಾರಿ- 59 ಹುದ್ದೆಗಳು.
- ಚಾರ್ಟರ್ಡ್ ಅಕೌಂಟೆಂಟ್- 32 ಹುದ್ದೆಗಳು.
- ಕಾನೂನು ಅಧಿಕಾರಿ- 27 ಹುದ್ದೆಗಳು.
- ಖಜಾನೆ ವ್ಯವಸ್ಥಾಪಕ- 10 ಹುದ್ದೆಗಳು.
- ಮಾರ್ಕೆಟಿಂಗ್ ಆಫೀಸರ್- 43 ಹುದ್ದೆಗಳು.
- ಕೃಷಿ ಅಧಿಕಾರಿ- 25 ಹುದ್ದೆಗಳು.
- ಅಧಿಕಾರಿ ಸ್ಕೇಲ್-3 - 210 ಹುದ್ದೆಗಳು.
No. of posts: 10368
Application Start Date: 8 ಜೂನ್ 2021
Application End Date: 28 ಜೂನ್ 2021
Work Location: Across India
Selection Procedure: - ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ನಡೆಸಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಆಯ್ಕೆಪಟ್ಟಿ ರಚಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಹುದ್ದೆಗಳಿಗೆ ಅನುಗುಣವಾಗಿ Degree, CA, Law ಮತ್ತು MBA (Marketing) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಹುದ್ದೆಗಳಿಗೆ ಅನುಗುಣವಾಗಿ ಕೆಲಸದ ಅನುಭವವನ್ನು ಹೊಂದಿರಬೇಕು.
Fee:
- ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು -850/- ರೂ ಗಳು ಮತ್ತು
- ಪ.ಪಂ ಮತ್ತು ಪ.ಜಾ, PWD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 175/- ರೂ ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
Age Limit:
- ಹುದ್ದೆಗೆ ಕನಿಷ್ಠ-18 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ-40 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಮೀಸಲಾತಿಗನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗಿದೆ.
Pay Scale: - ವೇತನ ಶ್ರೇಣಿಯ ಮಾಹಿತಿಯ ಬಗ್ಗೆ ತಿಳಿಯಲು ಅಧಿಕೃತ ಜಾಲತಾಣ ಅಥವಾ ಅಧಿಸೂಚನೆಯನ್ನು ವೀಕ್ಷಿಸಬಹುದು.




Comments