Loading..!

ವಿದ್ಯಾರ್ಹತೆ ಬೇಕಾಗಿಲ್ಲ! ಕೇವಲ ಕನ್ನಡ ಮಾತನಾಡಲು ಬಂದರೆ ಸಾಕು; ಹಾವೇರಿ DC ಕಚೇರಿಯಿಂದ ಭರ್ಜರಿ ಉದ್ಯೋಗಾವಕಾಶ!
Published by: Yallamma G | Date:8 ಜೂನ್ 2026
not found
Haveri DC Office Recruitment 2026: ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೇರ ನೇಮಕಾತಿ ಅಧಿಸೂಚನೆ ಪ್ರಕಟ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

KPSCVaani ಉದ್ಯೋಗ ಮಾಹಿತಿ: ಹಾವೇರಿ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಪ್ರಮುಖ ಸುದ್ದಿ. ಕರ್ನಾಟಕ ಸರ್ಕಾರದ ಹಾವೇರಿ ಜಿಲ್ಲಾಧಿಕಾರಿಗಳ ಕಾರ್ಯಾಲಯವು ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ಲೋಡರ್ ಮತ್ತು ಕ್ಲೀನರ್ ಹುದ್ದೆಗಳ ಭರ್ತಿಗೆ ವಿಶೇಷ ನೇರ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಹಾವೇರಿ ಡಿಸಿ ಆಫೀಸ್ ಕಚೇರಿಯಲ್ಲಿ ಖಾಲಿ ಇರುವ 77 ಕ್ಲೀನರ್ ಮತ್ತು ಲೋಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಯಾವುದೇ ರೀತಿಯ ಶೈಕ್ಷಣಿಕ ಅರ್ಹತೆ ಇರುವುದಿಲ್ಲ ಕನ್ನಡ ಓದಲು/ ಮಾತನಾಡಲು ಬರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಡಿಸಿ ಆಫೀಸ್ ಕಚೇರಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2026. 

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು, ವಯೋಮಿತಿ, ವೇತನ ಶ್ರೇಣಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕುರಿತು ವಿವರವಾದ ಮಾಹಿತಿ ಇಲ್ಲಿದೆ. 

visit official website

ಹುದ್ದೆಗಳ ವಿವರ ಮತ್ತು ಸಂಕ್ಷಿಪ್ತ ಮಾಹಿತಿ (Overview)
  • ಹುದ್ದೆಗಳ ಹೆಸರು : ಲೋಡರ್ (Loader) ಮತ್ತು ಕ್ಲೀನರ್ (Cleaner)  
  • ಒಟ್ಟು ಹುದ್ದೆಗಳ ಸಂಖ್ಯೆ : 77 ಹುದ್ದೆಗಳು (ಲೋಡರ್-60, ಕ್ಲೀನರ್-17)  
  • ನೇಮಕಾತಿ ವಿಧಾನ : ವಿಶೇಷ ನೇರ ನೇಮಕಾತಿ  
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 01 ಜೂನ್ 2026  
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಜೂನ್ 2026  
  • ಅರ್ಜಿ ಸಲ್ಲಿಸುವ ವಿಧಾನ : ನಿಗದಿಪಡಿಸಿದ ನಮೂನೆಯಲ್ಲಿ ಆಫ್‌ಲೈನ್ ಮೂಲಕ ಸಲ್ಲಿಸಬೇಕು.

ಹುದ್ದೆವಾರು ವರ್ಗೀಕರಣ (Vacancy Details)

ಹಾವೇರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 77 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅದರ ವಿವರ ಈ ಕೆಳಗಿನಂತಿದೆ:  
  • ಲೋಡರ್ (Loader): 60 ಹುದ್ದೆಗಳು  
  • ಕ್ಲೀನರ್ (Cleaner): 17 ಹುದ್ದೆಗಳು  
  • ಒಟ್ಟು: 77 ಹುದ್ದೆಗಳು
ಅರ್ಹತಾ ಮಾನದಂಡಗಳು (Eligibility Criteria)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯ ಪ್ರಕಾರ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಯಾವುದೇ ನಿರ್ದಿಷ್ಟ ವಿದ್ಯಾರ್ಹತೆ ಅನ್ವಯಿಸುವುದಿಲ್ಲ.  
ಭಾಷಾ ಜ್ಞಾನ: ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು ಗೊತ್ತಿರಬೇಕು.  
ಸೇವಾ ಅನುಭವ (ಪ್ರಮುಖ ಶರತ್ತು):
  • ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೋಡರ್ / ಕ್ಲೀನರ್ ಹುದ್ದೆಯಲ್ಲಿ ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಅಥವಾ 'ಸಮಾನ ಕೆಲಸಕ್ಕೆ ಸಮಾನ ವೇತನ' ಕಾರ್ಯದಡಿ ಸದ್ಯ ಕಾರ್ಯನಿರ್ವಹಿಸುತ್ತಿರಬೇಕು.  
  • ಈ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಪ್ರಸ್ತುತ ಕನಿಷ್ಠ 2 ವರ್ಷಗಳ ಸೇವೆಯಲ್ಲಿ ಮುಂದುವರೆದಿರುವ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.  
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ

ವಯೋಮಿತಿ (Age Limit)

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳಿಗೆ ಕೆಳಗಿನ ವಯೋಮಿತಿ ಇರಬೇಕು:  
ಕನಿಷ್ಠ ವಯಸ್ಸು: 18 ವರ್ಷ ಪೂರ್ಣಗೊಂಡಿರಬೇಕು.  
ಗರಿಷ್ಠ ವಯಸ್ಸು: 55 ವರ್ಷ ಮೀರಿರಬಾರದು. 

ವೇತನ ಶ್ರೇಣಿ (Salary Details)
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ:  
ಮಾಸಿಕ ವೇತನ ಶ್ರೇಣಿ: ರೂ. 27,000/- ದಿಂದ ರೂ. 46,675/- ವರೆಗೆ ಇರಲಿದೆ.  

ಅರ್ಜಿ ನಮೂನೆ ಪಡೆಯುವ ಮತ್ತು ಸಲ್ಲಿಸುವ ವಿಳಾಸ
ಅಭ್ಯರ್ಥಿಗಳು ಹಾವೇರಿ ಜಿಲ್ಲೆಯ ಆಯಾ ನಗರ ಸ್ಥಳೀಯ ಸಂಸ್ಥೆಗಳ ಕಛೇರಿಗಳಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಕೆಳಕಂಡ ಕಛೇರಿಗಳಲ್ಲಿ ಸಲ್ಲಿಸಬೇಕು:  
  • ನಗರಸಭೆಗಳು: ಹಾವೇರಿ / ರಾಣೇಬೆನ್ನೂರು  
  • ಪುರಸಭೆಗಳು: ಬ್ಯಾಡಗಿ / ಹಾನಗಲ್ಲ / ಸವಣೂರು / ಶಿಗ್ಗಾಂವ / ಬಂಕಾಪುರ  
  • ಪಟ್ಟಣ ಪಂಚಾಯಿತಿಗಳು: ಹಿರೇಕೆರೂರು / ಗುತ್ತಲ / ರಟ್ಟಿಹಳ್ಳಿ
ಮುಖ ದಿನಾಂಕಗಳು (Important Dates)
  • ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ: 01/06/2026  
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/06/2026  
ಇದನ್ನು ಓದಿ : KSP Recruitment 2026 Notification Released: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ಹುದ್ದೆಗಳ ಬೃಹತ್ ನೇಮಕಾತಿ! KEA ಮೂಲಕ ಅರ್ಜಿ ಆಹ್ವಾನ

ಗಮನಿಸಿ: ಈ ನೇಮಕಾತಿಯು ಸರ್ಕಾರದ ಹಾಗೂ ಪೌರಾಡಳಿತ ನಿರ್ದೇಶನಾಲಯದಿಂದ ಕಾಲ ಕಾಲಕ್ಕೆ ಹೊರಡಿಸುವ ಆದೇಶ ಮತ್ತು ಸುತ್ತೋಲೆಯ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ವಿವರವಾದ ಅಧಿಸೂಚನೆಗಾಗಿ ಅಭ್ಯರ್ಥಿಗಳು ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ಹಾವೇರಿ ಅಥವಾ ಆಯಾ ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ ಕಛೇರಿಗಳನ್ನು ಸಂಪರ್ಕಿಸಬಹುದು.

KPSCVaani ಟಿಪ್: ಇಂತಹ ಮತ್ತಷ್ಟು ಕರ್ನಾಟಕ ಸರ್ಕಾರಿ ಉದ್ಯೋಗಗಳ ಅಪ್ಡೇಟ್‌ಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ದಿನಾಲೂ ಭೇಟಿ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
Application End Date:  30 ಜೂನ್ 2026
Pay Scale: 27000 - 46675 INR
Employment Type: FULL_TIME
Hiring Organization: DC Office Haveri https://haveri.nic.in/en/
Work Location: District Administrative Complex, Devagiri, Haveri, Haveri, KA, 581110
To Download Official Notification

Comments