KSP Recruitment 2026 Notification Released: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ಹುದ್ದೆಗಳ ಬೃಹತ್ ನೇಮಕಾತಿ! KEA ಮೂಲಕ ಅರ್ಜಿ ಆಹ್ವಾನ

KSP Civil Police Constable Recruitment 2026: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಕರ್ನಾಟಕದ ನಿರುದ್ಯೋಗಿ ಯುವಕ-ಯುವತಿಯರಿಗೆ ಸುವರ್ಣಾವಕಾಶ! ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) ಮಿಕ್ಕುಳಿದ ವೃಂದದಲ್ಲಿ (ಉಳಿದ ಮೂಲ ವೃಂದ) ಖಾಲಿ ಇರುವ 3391 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇರ ನೇಮಕಾತಿಗಾಗಿ ಬೃಹತ್ ಅಧಿಸೂಚನೆ ಹೊರಡಿಸಿದೆ.
ಈ ಬಾರಿ ವಿಶೇಷವೆಂದರೆ, ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸಲಾಗುವ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ನಡೆಸಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳಾದ ವಿದ್ಯಾರ್ಹತೆ, ವಯೋಮಿತಿ, ಸಂಬಳ, ಪರೀಕ್ಷಾ ವಿಧಾನ ಮತ್ತು ಪ್ರಮುಖ ದಿನಾಂಕಗಳನ್ನು ಈ ಕೆಳಗೆ ನೀಡಲಾಗಿದೆ.
ವೇತನ ಶ್ರೇಣಿ :
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಆರಂಭಿಕ ವೇತನ ರೂ. 37,500 ರಿಂದ ರೂ. 76,100/- ವರೆಗೆ ಇರಲಿದೆ (ವೇತನ ಶ್ರೇಣಿ: 37500-900-39300-1000-43300-1125-47800-1250-52800-1375-58300-1500-64300-1650-74200-1900-76100). ಜೊತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯ ಅನ್ವಯವಾಗುತ್ತದೆ. 
ವಯೋಮಿತಿ (Age Limit) :
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಕರ್ನಾಟಕ ಸರ್ಕಾರದ ಆದೇಶದಂತೆ ಈ ಬಾರಿ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ!
ನೇರ ಪುರುಷ, ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ:
ಸಾಮಾನ್ಯ ಅರ್ಹತೆ (GM): 33 ವರ್ಷಗಳು
SC / ST / ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗಳಿಗೆ: 35 ವರ್ಷಗಳು
ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ: 38 ವರ್ಷಗಳು
ಸೇವಾನಿರತ (In-Service) ಅಭ್ಯರ್ಥಿಗಳಿಗೆ:
ಸಾಮಾನ್ಯ ಅರ್ಹತೆ (GM): 38 ವರ್ಷಗಳು
SC / ST / ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗಳಿಗೆ: 40 ವರ್ಷಗಳು

ಅರ್ಜಿ ಶುಲ್ಕ (Application Fee)
ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಬೇಕಿರುತ್ತದೆ:
ಸಾಮಾನ್ಯ ಅರ್ಹತೆ (GM) ಮತ್ತು ಇತರ ಹಿಂದುಳಿದ ಪ್ರವರ್ಗಗಳು: ರೂ. 750/-
SC, ST, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು: ರೂ. 500/-
ಲಿಖಿತ ಪರೀಕ್ಷಾ ದಿನಾಂಕ ಮತ್ತು ನೆಗೆಟಿವ್ ಮಾರ್ಕಿಂಗ್:
- ಪರೀಕ್ಷಾ ದಿನಾಂಕ: 02.08.2026 (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ - ಒಟ್ಟು 90 ನಿಮಿಷಗಳು).
- ಪಠ್ಯಕ್ರಮ: ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ಮಾನಸಿಕ ಸಾಮರ್ಥ್ಯ ಇತ್ಯಾದಿ.
- ಋಣಾತ್ಮಕ ಮೌಲ್ಯಮಾಪನ (Negative Marks): ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು.
- ಕಡ್ಡಾಯ ಕನ್ನಡ ಪರೀಕ್ಷೆ: ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಕನ್ನಡ ಓದದ ಅಭ್ಯರ್ಥಿಗಳಿಗೆ 150 ಅಂಕಗಳ ಕನ್ನಡ ಭಾಷಾ ಪರೀಕ್ಷೆ ಇರಲಿದ್ದು, ಕನಿಷ್ಠ 50 ಅಂಕ ಗಳಿಸಬೇಕು.
ದೈಹಿಕ ಮಾನದಂಡಗಳು (Physical Standards - PST)
- ಪುರುಷ ಅಭ್ಯರ್ಥಿಗಳು: ಕನಿಷ್ಠ ಎತ್ತರ 168 ಸೆಂ.ಮೀ, ಎದೆ ಸುತ್ತಳತೆ 86 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಣೆ).
- ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು: ಕನಿಷ್ಠ ಎತ್ತರ 157 ಸೆಂ.ಮೀ, ಕನಿಷ್ಠ ತೂಕ 45 ಕೆ.ಜಿ.
- ದೈಹಿಕ ಸಹಿಷ್ಣುತೆ ಪರೀಕ್ಷೆ (ET): ಪುರುಷರಿಗೆ 1600 ಮೀಟರ್ ಓಟ (6 ನಿಮಿಷ 30 ಸೆಕೆಂಡ್), ಮಹಿಳೆಯರು/ಮಾಜಿ ಸೈನಿಕರಿಗೆ 400 ಮೀಟರ್ ಓಟ (2 ನಿಮಿಷ) ಮತ್ತು ಉದ್ದ ಜಿಗಿತ/ಎತ್ತರ ಜಿಗಿತ, ಗುಂಡು ಎಸೆತ ಸ್ಪರ್ಧೆಗಳು ಇರುತ್ತವೆ.
ಪ್ರಮುಖ ದಿನಾಂಕಗಳು (Important Dates)
ನಿಮ್ಮ ಉದ್ಯೋಗದ ಕನಸನ್ನು ನನಸಾಗಿಸಲು ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ:- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ: 08.06.2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.07.2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 04.07.2026
- ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 02.08.2026

Comments