Loading..!

BSNL ನೇಮಕಾತಿ 2026: ಬಿಎಸ್‌ಎನ್‌ಎಲ್‌ನಲ್ಲಿ ಬಂಪರ್ ಅವಕಾಶ, ಯಾವುದೇ ಪರೀಕ್ಷೆ ಇಲ್ಲದೆ ನೇರ ಆಯ್ಕೆ! ಇಂದೇ ಅರ್ಜಿ ಸಲ್ಲಿಸಿ
Tags: MBA CA CMA
Published by: Heena Sheregar | Date:6 ಜೂನ್ 2026
not found
"ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಸರಿಯಾದ ಸಮಯಕ್ಕೆ ನಿಖರವಾದ ಮಾಹಿತಿ ಸಿಕ್ಕರೆ ಮಾತ್ರ ಯಶಸ್ಸು ಸಾಧ್ಯ. ದೇಶದ ಬೃಹತ್ ನೇಮಕಾತಿಗಳ ಪ್ರತಿ ಅಪ್ಡೇಟ್ ಈಗ ನಿಮ್ಮ ಬೆರಳ ತುದಿಯಲ್ಲಿ! ಲಾಗ್ ಇನ್ ಆಗಿ — KPSCVAANI.COM."

ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ್ ನಿಗಮ ಲಿಮಿಟೆಡ್ (BSNL) ವತಿಯಿಂದ ನಿರುದ್ಯೋಗಿಗಳಿಗೆ ಬಂಫರ್ ಕೊಡುಗೆಯನ್ನು ನೀಡಲಾಗಿದೆ. ಪ್ರಸ್ತುತ ಮುಕ್ತ ಮಾರುಕಟ್ಟೆಯಿಂದ ಒಪ್ಪಂದದ ಆಧಾರದ ಮೇಲೆ ಫೈನಾನ್ಸ್ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಖಾಲಿ ಇರುವ ಒಟ್ಟು 15 ಜನರಲ್ ಮ್ಯಾನೇಜರ್ (GM) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶಾದ್ಯಂತ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಉನ್ನತ ಹುದ್ದೆಗಳನ್ನು ಹುಡುಕುತ್ತಿರುವ ವೃತ್ತಿಪರರಿಗೆ ಇದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.

ಈ ಪ್ರತಿಷ್ಠಿತ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಬರೋಬ್ಬರಿ ₹2.25 ಲಕ್ಷದವರೆಗೆ ಆಕರ್ಷಕ ಏಕೀಕೃತ ವೇತನ ಹಾಗೂ ವಾರ್ಷಿಕ ಶೇಕಡಾ 5 ರಷ್ಟು ವೇತನ ಬಡ್ತಿಯನ್ನು ನೀಡಲಾಗುತ್ತದೆ. ಸಿಎ (CA), ಸಿಎಂಎ (CMA) ಅಥವಾ ಫೈನಾನ್ಸ್ ವಿಭಾಗದಲ್ಲಿ ಎಂಬಿಎ (MBA) ಮುಗಿಸಿ ಕನಿಷ್ಠ 15 ವರ್ಷಗಳ ಸುದೀರ್ಘ ಅನುಭವ ಹೊಂದಿರುವ 50 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ಶಾರ್ಟ್‌ಲಿಸ್ಟ್ ಮತ್ತು ಸಂದರ್ಶನದ (Interview) ಆಧಾರದ ಮೇಲೆ ನೇರ ಆಯ್ಕೆ ನಡೆಯಲಿದೆ.

ಅರ್ಹ ಆಕಾಂಕ್ಷಿಗಳು ಬಿಎಸ್‌ಎನ್‌ಎಲ್‌ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 9, 2026 ರಿಂದ ಲಿಂಕ್ ಲಭ್ಯವಾಗಲಿದ್ದು, ಅರ್ಜಿ ಸಲ್ಲಿಸಲು ಜೂನ್ 24, 2026 ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತರು ಇಂದೇ ಅಗತ್ಯ ದಾಖಲೆಗಳೊಂದಿಗೆ ಸಿದ್ಧರಾಗಿ ಕೊನೆಯ ದಿನಾಂಕದ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

BSNL ನೇಮಕಾತಿ  ಅಧಿಸೂಚನೆಯ ವಿವರ : 
  • ನೇಮಕಾತಿ ಸಂಸ್ಥೆ: ಭಾರತ ಸಂಚಾರ್ ನಿಗಮ ಲಿಮಿಟೆಡ್ (BSNL)  
  • ಹುದ್ದೆಯ ಹೆಸರು: ಜನರಲ್ ಮ್ಯಾನೇಜರ್ (Finance & Accounts Stream)  
  • ಒಟ್ಟು ಹುದ್ದೆಗಳು: 15 ಹುದ್ದೆಗಳು
  • ಕೆಲಸದ ಸ್ಥಳಅಖಿಲ ಭಾರತ (ಬೆಂಗಳೂರು, ಮುಂಬೈ, ನವದೆಹಲಿ ಇತ್ಯಾದಿ)  
ಹುದ್ದೆಗಳ ಹಂಚಿಕೆ ಮತ್ತು ಕೆಲಸದ ಸ್ಥಳ (Job Location & Vacancy Break-up):
  • ಬಿಎಸ್‌ಎನ್‌ಎಲ್ ಕಾರ್ಪೊರೇಟ್ ಕಚೇರಿ (ನವದೆಹಲಿ): 05 ಹುದ್ದೆಗಳು  
  • ಕರ್ನಾಟಕ ವಲಯ / ದಕ್ಷಿಣ ವಲಯ (ಬೆಂಗಳೂರು): 01 ಹುದ್ದೆ  
  • ಮಹಾರಾಷ್ಟ್ರ / ಪಶ್ಚಿಮ ವಲಯ (ಮುಂಬೈ): 01 ಹುದ್ದೆ  
  • ಕೇರಳ ವಲಯ (ತಿರುವನಂತಪುರಂ): 01 ಹುದ್ದೆ  
  • ತಮಿಳುನಾಡು ವಲಯ (ಚೆನ್ನೈ): 01 ಹುದ್ದೆ  
  • ಗುಜರಾತ್ ವಲಯ (ಅಹಮದಾಬಾದ್): 01 ಹುದ್ದೆ 
  • ಪಂಜಾಬ್ ವಲಯ (ಚಂಡೀಗಢ): 01 ಹುದ್ದೆ  
  • ಪಶ್ಚಿಮ ಬಂಗಾಳ / ಪೂರ್ವ ವಲಯ (ಕೋಲ್ಕತಾ): 01 ಹುದ್ದೆ  
  • ತೆಲಂಗಾಣ ವಲಯ (ಹೈದರಾಬಾದ್): 01 ಹುದ್ದೆ  
  • ಉತ್ತರ ಪ್ರದೇಶ - ಈಸ್ಟ್ (ಲಕ್ನೋ): 01 ಹುದ್ದೆ  ITPC (ಪುಣೆ): 01 ಹುದ್ದೆ  
ಶೈಕ್ಷಣಿಕ ಅರ್ಹತೆ (Educational Qualification):
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ CA, CMA, MBA (Finance), ಅಥವಾ Post Graduate Diploma in Management (Finance) ಪದವಿಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರಬೇಕು.  

ಅಗತ್ಯವಿರುವ ಅನುಭವ (Work Experience Criteria):
  • ಅಭ್ಯರ್ಥಿಗಳು ಫೈನಾನ್ಸ್ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಕನಿಷ್ಠ 15 ವರ್ಷಗಳ ನಂತರದ ಉದ್ಯೋಗ ಅನುಭವವನ್ನು ಹೊಂದಿರಬೇಕು.  
  • ಇದರಲ್ಲಿ ಕನಿಷ್ಠ 5 ವರ್ಷಗಳ ಕಾಲ ಡೆಪ್ಯುಟಿ ಜನರಲ್ ಮ್ಯಾನೇಜರ್ (DGM) ಅಥವಾ ಅದಕ್ಕಿಂತ ಹೆಚ್ಚಿನ ಹಿರಿಯ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರಬೇಕು.  
  • ಅಭ್ಯರ್ಥಿಗಳು ಕನಿಷ್ಠ ₹3,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ವಹಿವಾಟು (Turnover) ಹೊಂದಿರುವ ಪಟ್ಟಿಮಾಡಿದ ಕಂಪನಿಗಳು (Listed Companies) ಅಥವಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.  

ವಯೋಮಿತಿ ಮತ್ತು ಸಡಿಲಿಕೆ (Age Limit):
  • ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಯ ಗರಿಷ್ಠ ವಯಸ್ಸು 50 ವರ್ಷಗಳು ಮೀರಿರಬಾರದು.  
  • ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.  
ವೇತನ ಮತ್ತು ಇತರೆ ಸೌಲಭ್ಯಗಳು (Salary & Emoluments):
  • ಮಾಸಿಕ ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹2,25,000/- ಗಳ ಸ್ಥಿರ ಏಕೀಕೃತ ವೇತನವನ್ನು ನೀಡಲಾಗುತ್ತದೆ (TDS ಕಡಿತ ಅನ್ವಯಿಸುತ್ತದೆ).  
  • ವಾರ್ಷಿಕ ಹೆಚ್ಚಳ: ಪ್ರತಿ ವರ್ಷ 5% ವಾರ್ಷಿಕ ವೇತನ ಹೆಚ್ಚಳ (Increment) ಇರಲಿದೆ.  
  • ಇತರ ಸೌಲಭ್ಯಗಳು: ಕಚೇರಿ ಕೆಲಸಗಳಿಗಾಗಿ ವಾಹನ ಸೌಲಭ್ಯ ಮತ್ತು ವಸತಿ ದೂರವಾಣಿ ಸಂಪರ್ಕವನ್ನು ಒದಗಿಸಲಾಗುತ್ತದೆ. (ಆದರೆ ವಸತಿ ಸೌಕರ್ಯ ಅಥವಾ ವೈದ್ಯಕೀಯ ಮರುಪಾವತಿ ಸೌಲಭ್ಯ ಇರುವುದಿಲ್ಲ).  
ಆಯ್ಕೆ ಪ್ರಕ್ರಿಯೆ (Selection Process):
  • ಹಂತ-1 (Shortlisting): ಅಭ್ಯರ್ಥಿಗಳ ವಯಸ್ಸು, ಅರ್ಹತೆ ಮತ್ತು ಕೆಲಸದ ಅನುಭವದ ಆಧಾರದ ಮೇಲೆ ಪ್ರಾಥಮಿಕ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.  
  • ಹಂತ-2 (GD & Interview): ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಗುಂಪು ಚರ್ಚೆ (Group Discussion), ಪ್ರೆಸೆಂಟೇಶನ್ (Presentation) ಮತ್ತು ವೈಯಕ್ತಿಕ ಸಂದರ್ಶನಕ್ಕೆ (Personal Interview) ಕರೆಯಲಾಗುತ್ತದೆ.  
ಅಂಕಗಳ ಹಂಚಿಕೆ (Weightage Criteria):
  • ಕೋರ್ ಫೈನಾನ್ಸ್ ಮತ್ತು ಸರ್ಕಾರಿ/ಪಿಎಸ್‌ಯು/ಟಿಎಸ್‌ಪಿ ಅನುಭವ: 50% ಅಂಕಗಳು  
  • ಗುಂಪು ಚರ್ಚೆ (Group Discussion): 10% ಅಂಕಗಳು  
  • ಪ್ರೆಸೆಂಟೇಶನ್ (Presentation): 10% ಅಂಕಗಳು  ವೈಯಕ್ತಿಕ ಸಂದರ್ಶನ (Personal Interview): 30% ಅಂಕಗಳು  

ಅರ್ಜಿ ಶುಲ್ಕ (Application Fee):
  • ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ₹1,000/- (ಒಂದು ಸಾವಿರ ರೂಪಾಯಿಗಳು).  
  • ಪಾವತಿ ವಿಧಾನ: ಶುಲ್ಕವನ್ನು ಬಿಎಸ್‌ಎನ್‌ಎಲ್ ವೆಬ್‌ಸೈಟ್‌ನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು. ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ.  

ಅರ್ಜಿ ಸಲ್ಲಿಸುವ ವಿಧಾನ (How to Apply Online):
  • ಮೊದಲಿಗೆ ಬಿಎಸ್‌ಎನ್‌ಎಲ್‌ನ ಅಧಿಕೃತ ಕೆರಿಯರ್ ವೆಬ್‌ಸೈಟ್‌ಗೆ ಭೇಟಿ ನೀಡಿ: www.bsnl.co.in.
  • ವೆಬ್‌ಸೈಟ್‌ನಲ್ಲಿ "Careers" ವಿಭಾಗಕ್ಕೆ ಹೋಗಿ ಜನರಲ್ ಮ್ಯಾನೇಜರ್ ನೇಮಕಾತಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ.  
  • ನಿಮ್ಮ ಸಕ್ರಿಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ (Registration) ಮಾಡಿಕೊಳ್ಳಿ.  
  • ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ, ಶೈಕ್ಷಣಿಕ ಮತ್ತು ವೃತ್ತಿಪರ ಅನುಭವದ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.  
  • ನಿಮ್ಮ ಇತ್ತೀಚಿನ ಫೋಟೋ, ಸಹಿ, ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಅನುಭವದ ಪತ್ರಗಳನ್ನು (Self-Attested ಗೊಳಿಸಿ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  • ನಿಗದಿಪಡಿಸಿದ ₹1,000/- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.  
  • ಅರ್ಜಿಯನ್ನು ಅಂತಿಮವಾಗಿ ಸಬ್ಮಿಟ್ ಮಾಡುವ ಮುನ್ನ ಎಲ್ಲಾ ವಿವರಗಳನ್ನು ಮರುಪರಿಶೀಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.  
ಅಗತ್ಯವಿರುವ ದಾಖಲೆಗಳು (Documents Required):
  • ನವೀಕರಿಸಿದ ಬಯೋಡೇಟಾ / ರೆಸ್ಯೂಮ್ (CV)  
  • ವಯಸ್ಸಿನ ಪುರಾವೆ (SSLC ಅಂಕಪಟ್ಟಿ/ಜನನ ಪ್ರಮಾಣಪತ್ರ)  
  • ಪ್ಯಾನ್ ಕಾರ್ಡ್ (PAN Card) ನಕಲು  
  • ಶೈಕ್ಷಣಿಕ ಮತ್ತು ಅನುಭವದ ಪ್ರಮಾಣಪತ್ರಗಳು  
  • ಪ್ರಸ್ತುತ ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ಪಡೆದ ಸಂಬಳದ ಪ್ರಮಾಣಪತ್ರ (Salary Slip)
  • ಸರ್ಕಾರಿ/ಪಿಎಸ್‌ಯುನಲ್ಲಿ ಕೆಲಸ ಮಾಡುತ್ತಿದ್ದರೆ NOC (No Objection Certificate)  
ಪ್ರಮುಖ ದಿನಾಂಕಗಳು (Important Dates): 
  • ಅಧಿಸೂಚನೆ ಹೊರಡಿಸಿದ ದಿನಾಂಕ: 04 ಜೂನ್ 2026  
  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 09 ಜೂನ್ 2026 (ಬೆಳಗ್ಗೆ 10:00 ಗಂಟೆಯಿಂದ)  
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಜೂನ್ 2026 (ಬೆಳಗ್ಗೆ 10:00 ಗಂಟೆಯವರೆಗೆ) 
  • ಅರ್ಜಿಯನ್ನು ಎಡಿಟ್ ಮಾಡಲು ಅವಕಾಶ: 25 ಜೂನ್ ರಿಂದ 28 ಜೂನ್ 2026 ರವರೆಗೆ  
No. of posts:  15
Application Start Date:  9 ಜೂನ್ 2026
Application End Date:  24 ಜೂನ್ 2026
Employment Type: FULL_TIME
Hiring Organization: BSNL
Work Location: Eastern Court, Janpath, New Delhi, KA, 110001
To download official notification
Related Tags: MBA CA CMA

Comments