Loading..!

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯ (KSET) ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ | ಈ ಕುರಿತ ಮಾಹಿತಿ ನಿಮಗಾಗಿ
Published by: Bhagya R K | Date:19 ಸೆಪ್ಟೆಂಬರ್ 2025
Image not found

ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET 2025)ಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಬಿದ್ದಿದೆ. KSET-2025 ಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಮನವಿಯನ್ನು ಪರಿಗಣಿಸಿ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಜಿದಾರರಿಗೆ ಅನುಕೂಲವಾಗುವಂತೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 18, 2025ರಿಂದ ಸೆಪ್ಟೆಂಬರ್ 24, 2025ರವರೆಗೆ ವಿಸ್ತರಿಸಲಾಗಿದೆ.


ಹಿಂದಿನಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-09-2025 ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ 19-09-2025 ಎಂದು ನಿಗದಿಪಡಿಸಲಾಗಿತ್ತು. ಆದರೆ, ಕೆಲವು ಅಭ್ಯರ್ಥಿಗಳ ವಿನಂತಿಯ ಮೇರೆಗೆ ಈ ದಿನಾಂಕವನ್ನು ಕೊನೆಯ ಅವಕಾಶವಾಗಿ ವಿಸ್ತರಿಸಲಾಗಿದೆ.


ಅದೇ ರೀತಿ, ಕೆ-ಸೆಟ್ 2024ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಡಾಕ್ಯುಮೆಂಟ್ ಪರಿಶೀಲನೆ (Document Verification) ಕಾರ್ಯಕ್ರಮವು 2025ರ ಸೆಪ್ಟೆಂಬರ್ 23ರಂದು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


ಹೊಸ ದಿನಾಂಕಗಳು :
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-09-2025
- ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 25-09-2025


👉ಈ ದಿನಾಂಕ ವಿಸ್ತರಣೆಯಿಂದ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಸಿಕ್ಕಿದ್ದು, ತಕ್ಷಣವೇ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಲಾಗಿದೆ.


ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆ-ಸೆಟ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Comments

Shankar ನಾಯಕ ಸೆಪ್ಟೆ. 19, 2025, 12:34 ಅಪರಾಹ್ನ
Shankar ನಾಯಕ ಸೆಪ್ಟೆ. 19, 2025, 12:34 ಅಪರಾಹ್ನ
Shankar ನಾಯಕ ಸೆಪ್ಟೆ. 19, 2025, 12:34 ಅಪರಾಹ್ನ