* ಕಾಲೇಜು ವಿದ್ಯಾರ್ಥಿಗಳ ಪಠ್ಯದಲ್ಲಿ 'ಚುನಾವಣಾ ಸಾಕ್ಷರತೆ' ಸೇರ್ಪಡೆಗೊಳಿಸುವ ಮೂಲಕ ಯುವ ಮತದಾರರಲ್ಲಿ ಪ್ರಜಾಪ್ರಭುತ್ವದ ಶಕ್ತಿಯ ಕುರಿತು ಜಾಗೃತಿ ಮೂಡಿಸುವಂತೆ ಎಲ್ಲ ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ 'ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸೂಚಿಸಿದೆ. * ವಿಶ್ವ ವಿದ್ಯಾಲಯಗಳಲ್ಲಿ - ಕಾಲೇಜುಗಳಲ್ಲಿ ಅಣಕು ಮತದಾನ ಶಿಬಿರಗಳನ್ನು ಆಯೋಜಿಸುವಂತೆ ಹಾಗೂ ಯುವಕರಿಗೆ 'ಮತದಾನ ಸಂಕಲ್ಪ' ಬೋಧನೆ ಮಾಡುವಂತೆ ಸೂಚಿಸಲಾಗಿದೆ.* ಮತದಾರರ ಶಿಕ್ಷಣ ಮತ್ತು ಚುನಾವಣಾ ಸಾಕ್ಷರತೆಯನ್ನು ಸಂಯೋಜಿಸಲು 2 ನವೆಂಬರ್ 2023 ರಂದು ಶಿಕ್ಷಣ ಸಚಿವಾಲಯ ಮತ್ತು ಚುನಾವಣಾ ಆಯೋಗದ ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಮಾಡಲಾಗಿದೆ ಎಂದು ಯುಜಿಸಿಯು ದೇಶಾದ್ಯಂತದ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಪತ್ರ ಬರೆದಿದೆ. * ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಮತದಾನ ಶಿಬಿರ ಆಯೋಜಿಸಬೇಕು. ಹಾಗೂ ಯೂಕರಿಗೆ ಮತದಾನ ಸಂಕಲ್ಪ ಬೋಧನೆ ಮಾಡಬೇಕು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ ಸೂಚನೆ ನೀಡಲಾಗಿದೆ.