* ದೇಶದಲ್ಲಿ ಪ್ರಸ್ತುತ 10 ಕಪ್ಪು ಹುಲಿಗಳು (ಮೆಲನಿಸ್ಟಿಕ್ ಹುಲಿಗಳು) ಇವೆ. ಅವೆಲ್ಲವೂ ಒಡಿಶಾದ ಸಿಂಪ್ಲಿಪಾಲ್‌ನಲ್ಲಿಯೇ ಇವೆ ಎಂದು ಸರ್ಕಾರವು ಸಂಸತ್ತಿಗೆ 21 ಡಿಸೆಂಬರ್ 2023 ರಂದು ತಿಳಿಸಿತು.* 2022ರಲ್ಲಿ ದೇಶದಾದ್ಯಂತ ನಡೆಸಿದ್ದ ಹುಲಿ ಗಣತಿ ಪ್ರಕಾರ ಸಿಂಪ್ಲಿಪಾಲ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 16 ಹುಲಿಗಳಿವೆ. ಅವುಗಳಲ್ಲಿ 10 ಹುಲಿಗಳು ಮೆಲಾನಿಸಮ್ (ಕಪ್ಪು ಪಟ್ಟಿಗಳು ಪ್ರಧಾನವಾಗಿ ಗೋಚರಿಸುವುದು) ಲಕ್ಷಣ ಹೊಂದಿವೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರಾಜ್ಯಸಭೆಗೆ ತಿಳಿಸಿದರು.* ಸಿಂಪ್ಲಿಪಾಲ್ ಹುಲಿ ಸಂರಕ್ಷಿತ ಪ್ರದೇಶವು ವನ್ಯಜೀವಿ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿ ಕೇಂದ್ರ ಪ್ರಾಯೋಜಿತ ಯೋಜನೆಯಡಿಯಲ್ಲಿ ವನ್ಯಜೀವಿ ಸಂರಕ್ಷಣೆ, ಆವಾಸಸ್ಥಾನ ನಿರ್ವಹಣೆ, ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ರೂ 32.75 ಕೋಟಿ ಆರ್ಥಿಕ ನೆರವು ಪಡೆದಿದೆ.