* ಭಾರತದ ಚಂದ್ರಯಾನ-3 ಯೋಜನೆಯ ಯಶಸ್ಸಿಗಾಗಿ ಐಸ್‌ಲ್ಯಾಂಡ್‌ ಹುಸಾವಿಕ್‌ನಲ್ಲಿರುವ 'ಎಕ್ಸ್‌ಫ್ಲೋ ರೇಷನ್ ಮ್ಯೂಸಿಯಂ' ವತಿಯಿಂದ ಇಸ್ರೋಗೆ 2023ನೇ ಸಾಲಿನ 'ಲೀಫ್ ಎರಿಕ್ಸನ್ ಲೂನಾರ್' ಪ್ರಶಸ್ತಿ ನೀಡಲಾಗಿದೆ.* ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಷ್ಟೇ ಅಲ್ಲದೆ, ಚಂದ್ರನಲ್ಲಿನ ಅನ್ವೇಷಣೆ ಮುಂದುವರಿಸಿ ಬಾಹ್ಯಾಕಾಶದ ರಹಸ್ಯಗಳನ್ನು ಅರ್ಥೈಸಿಕೊಳ್ಳಲು ಇಸ್ರೋ ನೀಡಿರುವ ಕೊಡುಗೆಯನ್ನು ಪ್ರಶಸ್ತಿ ಸ್ಮರಿಸಲಿದೆ ಎಂದು ಎಕ್ಸ್‌ಫ್ಲೋ ರೇಷನ್ ಮ್ಯೂಸಿಯಂ ತಿಳಿಸಿದೆ.* ಲೀಫ್ ಎರಿಕ್ಸನ್ ಲೂನಾರ್ ಪ್ರಶಸ್ತಿಯನ್ನು ಇಸ್ರೋ ಪರವಾಗಿ ರಾಯಭಾರಿ ಬಾಲಸುಬ್ರಮಣ್ಯನ್ ಶ್ಯಾಮ್ ಅವರು ಸ್ವೀಕರಿಸಿದರು. ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಬೆಳೆಯುತ್ತಿರುವ ಪರಾಕ್ರಮಕ್ಕಾಗಿ ಅಂತರಾಷ್ಟ್ರೀಯ ಒತ್ತಿಹೇಳುತ್ತದೆ.