* ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯಲ್ಲಿ ಅಮೋಘ ಯಶಸ್ಸು ಗಳಿಸಿದ ಭಾರತದ ಯುವ ಬ್ಯಾಟಿಂಗ್‌ ತಾರೆ ಯಶಸ್ವಿ ಜೈಸ್ವಾಲ್‌ ಅವರು ಫೆಬ್ರುವರಿ ತಿಂಗಳ 'ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. * 22 ವರ್ಷದ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯಲ್ಲಿ 712 ರನ್ ಕಲೆಹಾಕಿದ್ದರು. ಈ ಮೂಲಕ ಅತಿ ಹೆಚ್ಚಿನ ರನ್ ಗಳಿಸಿದ ಶ್ರೇಯಸ್ಸು ಅವರದಾಗಿತ್ತು. * ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ (12) ಬಾರಿಸಿದ ದಾಖಲೆಯನ್ನು ಅವರು ರಾಜಕೋಟ್ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸುವ ಹಾದಿಯಲ್ಲಿ ಸರಿಗಟ್ಟಿದ್ದರು. ಸರಣಿಯಲ್ಲಿ ಎರಡು ದ್ವಿಶತಕ ಮತ್ತು ಮೂರು ಅರ್ಧ ಶತಕಗಳನ್ನು ಗಳಿಸಿದ್ದರು.*  ಜೈಸ್ವಾಲ್‌ ಅವರು ದ್ವಿಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.