* ವಿಶ್ವದ ಮೊದಲ ಎಐ ಸಾಫ್ಟ್ ವೇರ್ ಇಂಜಿನಿಯರ್ ಅನ್ನು ಪರಿಚಯಿಸಲಾಗಿದೆ. ಕಾಗ್ನಿಷಿಯನ್ ಕಂಪನಿ ಸೃಷ್ಟಿಸಿರುವ ಈ AI ಸಾಫ್ಟ್ ವೇರ್ ಇಂಜಿನಿಯರ್ ಕೋಡಿಂಗ್ ಮಾಡಲು ವೆಬ್ ಸೈಟ್ ಹಾಗೂ ಸಾಫ್ಟ್ ವೇರ್ ಸೃಷ್ಟಿಸಲು ಸಮರ್ಥವಾಗಿದೆ. * ಹೊಸ ಎಐ ಸಾಧನ ತುಂಬಾ ಸ್ಮಾರ್ಟ್ ಆಗಿದೆ, ಅದು ಕೋಡ್‌ ಗಳನ್ನು ಬರೆಯಬಹುದು, ವೆಬ್ಸೈಟ್ಗಳು ಮತ್ತು ಸಾಫ್ಟ್ವೇರ್ ಅನ್ನು ಒಂದೇ ಪ್ರಾಂಪ್ಟ್ನೊಂದಿಗೆ ರಚಿಸಬಹುದು ಎಂದು ವಿಶ್ವದ ಮೊದಲ ಎಐ ಸಾಫ್ಟ್‌ ವೇರ್‌ ಎಂಜಿನಿಯರ್‌ ಘೋಷಿಸಿದ್ದಾರೆ.* ಇದನ್ನು ಮಾನವ ಇಂಜಿನಿಯರ್ ಗಳ ಜೊತೆಗೆ ಕೆಲಸ ಮಾಡುವ ಉದ್ದೇಶದಿಂದ ಸೃಷ್ಟಿಸಲಾಗಿದೆ. ಯುಎಸ್ ಮೂಲದ ಟೆಕ್ ಸ್ಟಾರ್ಟ್-ಅಪ್, ಕಾಗ್ನಿಷನ್ ಪ್ರಪಂಚದ ಮೊದಲ AI ಸಾಫ್ಟ್‌ವೇರ್ ಇಂಜಿನಿಯರ್ ಡೆವಿನ್ ಅನ್ನು ಪರಿಚಯಿಸಿದೆ . * ಈ AI ಸಾಫ್ಟ್ ವೇರ್ ಇಂಜಿನಿಯರ್ ಗೆ 'ಡೆವಿನ್' ಎಂಬ ಹೆಸರು ನೀಡಲಾಗಿದೆ. ಕಾಗ್ನಿಷನ್ ಎಂಬ US ಮೂಲದ ಕಂಪನಿಯು 'ಡೆವಿನ್' ಎಂಬ ಹೊಸ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.* ಇದು ವಿಶ್ವದ ಮೊದಲ ಸಂಪೂರ್ಣ ಸ್ವಾಯತ್ತ AI ಸಾಫ್ಟ್‌ವೇರ್ ಇಂಜಿನಿಯರ್ ಎಂದು ಕರೆಯಲಾಗುತ್ತದೆ.* US ಮೂಲದ ಕಂಪನಿಯು 'ಡೆವಿನ್' ಎಂಬ ಹೊಸ ಕೃತಕ ಬುದ್ಧಿಮತ್ತೆ ತನ್ನದೇ ಆದ ಶೆಲ್ ಕೋಡ್ ಎಡಿಟರ್ ಮತ್ತು ವೆಬ್ ಬ್ರೌಸರ್ ಬಳಕೆಯ ಮೂಲಕ ಎಂಜಿನಿಯರಿಂಗ್ ಕಾರ್ಯಗಳನ್ನು ಪರಿಹರಿಸುವ ಸ್ವಾಯತ್ತ ಏಜೆಂಟ್ ಆಗಿದೆ ಎಂದು ಕಾಗ್ನಿಷನ್ ತಿಳಿಸಿದೆ.* ಡೆವಿನ್ ಅಂದಾಜು ಶೇ.14ರಷ್ಟು ಸಮಸ್ಯೆಗಳನ್ನು ಪರಿಹರಿಸಿದೆ. ಈ ಮೂಲಕ ಸಾಫ್ಟ್ ವೇರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡಿದೆ.