Job Description: ➤ ಪ್ರತಿ ವರ್ಷ ಆಗಸ್ಟ್ 19 ರಂದು ಜಾಗತಿಕವಾಗಿ ‘ವಿಶ್ವ ಮಾನವೀಯ ದಿನ’ (World Humanitarian Day - WHD) ವನ್ನು ಆಚರಿಸಲಾಗುತ್ತದೆ. ಯುದ್ಧ, ಪ್ರಾಕೃತಿಕ ವಿಕೋಪಗಳು, ನಿರಾಶ್ರಿತ ಸಮಸ್ಯೆಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ತಮ್ಮ ಪ್ರಾಣದ ಹಿತವನ್ನೂ ಲೆಕ್ಕಿಸದೆ ಇತರರ ಸೇವೆಗೆ ಧಾವಿಸುವ ಮಾನವೀಯ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಲು ಈ ದಿನವನ್ನು ಮೀಸಲಿಡಲಾಗಿದೆ.➤ 2026ರ ವಿಶ್ವ ಮಾನವೀಯ ದಿನದ ಧ್ಯೇಯವಾಕ್ಯ (Theme): ಸೇವೆಯಲ್ಲಿದ್ದಾಗ ಮಡಿದ ಮಾನವೀಯ ಕಾರ್ಯಕರ್ತರಿಗೆ ಗೌರವ ಸಲ್ಲಿಸುವುದು ಮತ್ತು ಆರೋಗ್ಯ ರಕ್ಷಣಾ ವಲಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಕರೆ ನೀಡುವುದು(Honoring fallen humanitarians and calling for greater protection of health care)➤ ಆಗಸ್ಟ್ 19 ರಂದೇ ಏಕಾಗ್ರವಾಗಿ ಆಚರಿಸಲಾಗುತ್ತದೆ? 2003ರ ಬಾಗ್ದಾದ್ ಬಾಂಬ್ ದಾಳಿ: 2003ರ ಆಗಸ್ಟ್ 19 ರಂದು ಇರಾಕ್‌ನ ಬಾಗ್ದಾದ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಾಗಿದ್ದ (ಕೆನಾಲ್ ಹೋಟೆಲ್) ಮೇಲೆ ಭೀಕರ ಬಾಂಬ್ ದಾಳಿ ನಡೆಯಿತು. ಈ ದಾಳಿಯಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಸರ್ಜಿಯೋ ವಿಯೆರಾ ಡಿ ಮೆಲ್ಲೊ (Sergio Vieira de Mello) ಸೇರಿ 22 ಪ್ರಮುಖ ಮಾನವೀಯ ಕಾರ್ಯಕರ್ತರು ಅಸುನೀಗಿದರು. ವಿಶ್ವಸಂಸ್ಥೆಯ ಅಧಿಕೃತ ಘೋಷಣೆ: ಈ ಘಟನೆಯ ಸವಿನೆನಪಿಗಾಗಿ 2008ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UNGA) ಪ್ರತಿ ವರ್ಷ ಆಗಸ್ಟ್ 19 ರಂದು ‘ವಿಶ್ವ ಮಾನವೀಯ ದಿನ’ವನ್ನಾಗಿ ಆಚರಿಸಲು ನಿರ್ಣಯ ಅಂಗೀಕರಿಸಿತು. ➤ WHO ನೀಡಿದ ಜಾಗತಿಕ ವರದಿ ಮತ್ತು ಕಳವಳಕಾರಿ ಅಂಕಿ-ಅಂಶಗಳು: ವಿಶ್ವ ಆರೋಗ್ಯ ಸಂಸ್ಥೆಯು (WHO) ತನ್ನ ಇತ್ತೀಚಿನ ವರದಿಯಲ್ಲಿ ಯುದ್ಧ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ಆಸ್ಪತ್ರೆಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ: UNSC ನಿರ್ಣಯ 2286 (2016): ಯುದ್ಧ ವಲಯಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಮತ್ತು ಸಿಬ್ಬಂದಿ ಮೇಲಿನ ದಾಳಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಅಂತರರಾಷ್ಟ್ರೀಯ ಮಾನವೀಯ ಕಾನೂನು. ದಾಳಿಗಳ ಅಂಕಿ-ಅಂಶ: WHO ನ 'Surveillance System for Attacks on Health Care' (SSA) ಪ್ರಕಾರ, ಡಿಸೆಂಬರ್ 2017 ರಿಂದ ಇಲ್ಲಿಯವರೆಗೆ 29 ದೇಶಗಳಲ್ಲಿ 10,400 ಕ್ಕೂ ಹೆಚ್ಚು ಆಸ್ಪತ್ರೆ/ವೈದ್ಯಕೀಯ ದಾಳಿಗಳು ನಡೆದಿವೆ. ಇದರಲ್ಲಿ 5,700 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 2026ರ ಪರಿಸ್ಥಿತಿ: ಉಕ್ರೇನ್, ಲೆಬನಾನ್, ಪಾಲೇಸ್ಟೈನ್ (Gaza) ಮತ್ತು ಮ್ಯಾನ್ಮಾರ್‌ಗಳಲ್ಲಿ ಆರೋಗ್ಯ ವಲಯದ ಮೇಲಿನ ದಾಳಿಗಳು ಹೆಚ್ಚಾಗಿ ವರದಿಯಾಗಿವೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ