Job Description: ➤ ಅಮೆರಿಕ ಸರ್ಕಾರದ ‘ಆಫೀಸ್ ಆಫ್ ಟ್ರೇಡ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಪಾಲಿಸಿ’ (OTMP) ಇತ್ತೀಚೆಗೆ ಬಿಡುಗಡೆ ಮಾಡಿರುವ "ದಿ ಗ್ರೇಟ್ ಟ್ರಾನ್ಸ್‌ಶಿಪ್‌ಮೆಂಟ್ ಸ್ಕ್ಯಾಮ್: ಗ್ಲೋಬಲ್ ಎವೇಶನ್ ಅಂಡ್ ಎಕನಾಮಿಕ್ ಕಾಸ್ಟ್ಸ್" (The Great Transhipment Scam) ಎಂಬ ವರದಿಯಲ್ಲಿ, ಚೀನಾ ದೇಶವು ಅಮೆರಿಕದ ಹೆಚ್ಚಿನ ಆಮದು ಸುಂಕದಿಂದ (Tariffs) ಬಚಾವಾಗಲು 'ಶ್ಯಾಡೋ ಟ್ರಾನ್ಸ್‌ಶಿಪ್‌ಮೆಂಟ್ ನೆಟ್‌ವರ್ಕ್' (Shadow Transhipment Network) ಬಳಸುತ್ತಿದೆ ಹಾಗೂ ಅದರಲ್ಲಿ ಭಾರತವೂ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳು ಭಾಗಿಯಾಗಿವೆ ಎಂದು ಆರೋಪಿಸಿದೆ. ➤ 'ಟ್ರಾನ್ಸ್‌ಶಿಪ್‌ಮೆಂಟ್' (Transhipment): ಸಾಮಾನ್ಯವಾಗಿ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಒಂದು ದೇಶದಿಂದ ಹೊರಟ ಸರಕು ಅಂತಿಮ ತಲುಪುವ ದೇಶಕ್ಕೆ ತಲುಪುವ ಮೊದಲು ನಡುವಿನ ಯಾವುದಾದರೂ ಮಧ್ಯವರ್ತಿ ದೇಶದ ಬಂದರು ಅಥವಾ ಭೂಪ್ರದೇಶದ ಮೂಲಕ ಹಾದುಹೋಗುವುದನ್ನು ಟ್ರಾನ್ಸ್‌ಶಿಪ್‌ಮೆಂಟ್ ಎನ್ನಲಾಗುತ್ತದೆ. ಆದರೆ ಅಮೆರಿಕದ ಆರೋಪದ ಪ್ರಕಾರ, 'ಅಕ್ರಮ ಅಥವಾ ಶ್ಯಾಡೋ ಟ್ರಾನ್ಸ್‌ಶಿಪ್‌ಮೆಂಟ್' ಅಂದರೆ: ಚೀನಾದಲ್ಲಿ ತಯಾರಾದ ವಸ್ತುಗಳನ್ನು ಭಾರತ, ಮೆಕ್ಸಿಕೋ ಅಥವಾ ವಿಯೆಟ್ನಾಂನಂತಹ ದೇಶಗಳಿಗೆ ತರುವುದು. ಅಲ್ಲಿ ಆ ವಸ್ತುಗಳ ಮೇಲಿನ ಲೇಬಲ್ (Re-labeling), ಪ್ಯಾಕಿಂಗ್ (Re-packaging) ಅಥವಾ ಸಣ್ಣಪುಟ್ಟ ಜೋಡಣೆ (Minor Assembly) ನಡೆಸಿ, ಅವು ಚೀನಾದಲ್ಲಿ ತಯಾರಾಗಿದ್ದಲ್ಲ, ಬದಲಿಗೆ ಆ ಮಧ್ಯವರ್ತಿ ದೇಶದಲ್ಲಿ ತಯಾರಾಗಿದ್ದು ಎಂದು ಉತ್ಪತ್ತಿ ಮೂಲದ ನಿಯಮಗಳನ್ನು (Rules of Origin) ಬದಲಾಯಿಸುವುದು. ಅಂತಿಮವಾಗಿ ಕಡಿಮೆ ಸುಂಕದ ಲಾಭ ಪಡೆದು ಅಮೆರಿಕನ್ ಮಾರುಕಟ್ಟೆಗೆ ರಫ್ತು ಮಾಡುವುದು. ➤ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರೋ ನೇತೃತ್ವದಲ್ಲಿ ಸಿದ್ಧಪಡಿಸಲಾದ ಈ ವರದಿಯಲ್ಲಿ 40ಕ್ಕೂ ಹೆಚ್ಚು ದೇಶಗಳನ್ನು ಮೂರು ಶ್ರೇಣಿಗಳಲ್ಲಿ (Tiers) ವಿಂಗಡಿಸಲಾಗಿದೆ: Tier 1 (Diversified Scale Leaders ): ಭಾರತ, ಕೆನಡಾ, ಮೆಕ್ಸಿಕೋ, ಇಯು, ಜಪಾನ್.Tier 2 (Integrated Supply Chain Hubs): ವಿಯೆಟ್ನಾಂ, ಮಲೇಷ್ಯಾ, ಬ್ರೆಜಿಲ್, ಥೈಲ್ಯಾಂಡ್ Tier 3 (Transhipment Corridors): ಕಾಂಬೋಡಿಯಾ, ಲಾವೋಸ್, ಮೈನಾಮಾರ್, ಯುಎಇ ➤ ಆರ್ಥಿಕ ನಷ್ಟದ ಅಂದಾಜು: 2025ರ ಸಾಲಿನಲ್ಲಿ ಮೆಕ್ಸಿಕೋ, ಭಾರತ ಮತ್ತು ವಿಯೆಟ್ನಾಂ ಮೂಲಕ ಅಂದಾಜು 67 ಬಿಲಿಯನ್ ಡಾಲರ್ ಮೌಲ್ಯದ ಚೀನೀ ಸರಕುಗಳು ಅಮೆರಿಕ ಪ್ರವೇಶಿಸಿದ್ದು, ಇದರಿಂದ ಅಮೆರಿಕ ಸುಮಾರು 28 ಬಿಲಿಯನ್ ಡಾಲರ್ ಸುಂಕದ ಆದಾಯ ಕಳೆದುಕೊಂಡಿದೆ ಎಂದು ಹೇಳಲಾಗಿದೆ.