* ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಕಳೆದ ಅಕ್ಟೋಬರ್‌ನಲ್ಲಿ 'ಮಿಷನ್‌ ಲೈಫ್‌' ಜಾಗತಿಕ ಆಂದೋಲನಕ್ಕೆ ಚಾಲನೆ ನೀಡಿದ್ದರು.* ಸುಸ್ಥಿರ ಜೀವನ ಶೈಲಿ ಉತ್ತೇಜಿಸುವ ಗುರಿ ಹೊಂದಿರುವ 'ಮಿಷನ್‌ ಲೈಫ್‌' (ಪರಿಸರಕ್ಕಾಗಿ ಜೀವನಶೈಲಿ) ಕೇಂದ್ರಿತ ವಿಶೇಷ ವಸ್ತು ಪ್ರದರ್ಶನವನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತವು  ಆಯೋಜಿಸಿತ್ತು.* 'ಮಿಷನ್ ಲೈಫ್' ಪ್ರದರ್ಶನದಲ್ಲಿ, ಇಂಧನ ಉಳಿಸಿ, ನೀರಿನ ಸಂರಕ್ಷಣೆ, ಸುಸ್ಥಿರ ಆಹಾರ, ಆರೋಗ್ಯಕರ ಜೀವನಶೈಲಿ ಅಳವಡಿಕೆ, ಏಕ ಬಳಕೆಯ ಪ್ಲಾಸ್ಟಿಕ್ ಬೇಡ, ತ್ಯಾಜ್ಯ ಮತ್ತು ಇ-ತ್ಯಾಜ್ಯ ತಗ್ಗಿಸುವುದು ಸೇರಿ ಪರಿಸರ ಸ್ನೇಹಿ ಜೀವನ ಶೈಲಿಯ ವಿವಿಧ ವಿಷಯಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು.* ವಿಶ್ವಸಂಸ್ಥೆ ರಾಯಭಾರಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್