* ಆರ್‌ಬಿಐ(Reserve Bank of India) ಗವರ್ನರ್ "ಶಕ್ತಿಕಾಂತ ದಾಸ್" ಅವರು ಆಗಸ್ಟ್ 17 ರಂದು UDGAM (Unclaimed Deposits - Gateway to Access information) ಪೋರ್ಟಲ್‌ ಅನ್ನು ಅನಾವರಣಗೊಳಿಸಿದ್ದಾರೆ* ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್‌ ಮತ್ತು ಸಿಟಿ ಬ್ಯಾಂಕ್‌ನಲ್ಲಿ ಯಾರೂ ಕೇಳದೆ ಉಳಿದುಕೊಂಡಿರುವ  ಠೇವಣಿಗಳನ್ನು ಈಗ ಹುಡುಕಬಹುದು. ಆರ್‌ಬಿಐ ಅಕ್ಟೋಬರ್ 15ಕ್ಕೂ ಮೊದಲು ಪೋರ್ಟಲ್‌ ಅನ್ನು ಆರಂಭಿಸಲಾಗುವುದು ಎಂದು ತಿಳಿಸಿದೆ. * ಸಾರ್ವಜನಿಕರಿಗೆ ಈ ಪೋರ್ಟಲ್ ತಮ್ಮ ಠೇವಣಿಗಳನ್ನು ಹುಡುಕಿ ಅಲ್ಲಿರುವ ಮೊತ್ತವನ್ನು ಹಿಂದಕ್ಕೆ ಪಡೆಯಲು ಅಥವಾ ಆ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ನೆರವಾಗುತ್ತದೆ ಎಂದು ತಿಳಿಸಿದೆ. * ಎಸ್‌ಬಿಐನಲ್ಲಿ 18,086 3 ಕೋಟಿ, ಪಂಜಾಬ್ ನ್ಯಾಷನಲ್ - ಬ್ಯಾಂಕ್‌ನಲ್ಲಿ 15,340 ಕೋಟಿ, ಕೆನರಾ - ಬ್ಯಾಂಕ್‌ನಲ್ಲಿ 74,558 ಕೋಟಿ ಮತ್ತು ಬ್ಯಾಂಕ್‌ ಆಫ್ ಬರೋಡದಲ್ಲಿ 13,904 ಕೋಟಿ  ವಷ್ಟು 735 ಸಾವಿರ ಕೋಟಿ ಮೊತ್ತವನ್ನು ಸರ್ಕಾರಿ ಬ್ಯಾಂಕ್‌ಗಳು ಫೆಬ್ರುವರಿಯಲ್ಲಿ 'ಆರ್‌ಬಿಐಗೆ ವರ್ಗಾವಣೆ ಮಾಡಿದ್ದವು. ಈ ರೀತಿ ವರ್ಷಗಳಿಂದ ಹಳೆ ಠೇವಣಿಗಳು ಉಳಿದುಕೊಂಡಿತ್ತು.* ಹೀಗೆ ಇತರ ಬ್ಯಾಂಕ್‌ ಳಲ್ಲಿನ ಠೇವಣಿಗಳನ್ನು ಹುಡುಕುವ ಸೌಲಭ್ಯವನ್ನು  ಆರಂಭಿಸಲಾಗುವುದು ಎಂದು  ತಿಳಿಸಿದೆ.