* ಕರ್ನಾಟಕ ರಾಜ್ಯ ಸರ್ಕಾರದಿಂದ ಆವರ್ತ ಆರ್ಥಿಕ ನೀತಿ ಶೀಘ್ರ ದಲ್ಲೇ ಜಾರಿಯಾಗಲಿದೆ.  ಎಲೆಕ್ಟ್ರಾನಿಕ್ ತ್ಯಾಜ್ಯ ಕಡಿಮೆಗೊಳಿಸುವದು ಹಾಗೂ ಅದನ್ನು ಮರು ಬಳಕೆ ಮತ್ತು ಮರು ಉತ್ಪಾದನೆ ಮಾಡುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.* ಆವರ್ತ ಆರ್ಥಿಕ ನೀತಿಯನ್ನು ಅನುಷ್ಠಾನಕ್ಕೆ ತಂದರೆ 2030ರ ವೇಳೆಗೆ ಭಾರತದ ಆವರ್ತ ಆರ್ಥಿಕತೆಯು 7218 ಶತಕೋಟಿಯಾಗಲಿದೆ' IT, BT ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.* ಈ ನೀತಿಯು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉತ್ಪಾದನೆಯಾಗುವ 'ಇ-ತ್ಯಾಜ್ಯ'ದ ಮರು ಬಳಕೆಗೆ ಬೇಕಾದ ಸುಸ್ಥಿರ ವ್ಯವಸ್ಥೆಯನ್ನು ಕಾರ್ಯಗತಗೊಳಿಸುತ್ತದೆ.* ತ್ಯಾಜ್ಯ ಸಂಗ್ರಹ ಸೌಲಭ್ಯ ಕೇಂದ್ರಗಳನ್ನು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸೇರಿದಂತೆ ಒಟ್ಟು 27 ಜಿಲ್ಲೆಗಳಲ್ಲಿ ತಲಾ 12 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.