➤ ಇಸ್ರೇಲ್ ಸರ್ಕಾರವು ರಾಜಕೀಯ ಪಕ್ಷಪಾತ, ಅಕಾರ್ಯಕ್ಷಮತೆ ಹಾಗೂ ಇಸ್ರೇಲ್ ವಿರೋಧಿ ನಿಲುವುಗಳ ಆರೋಪದ ಹಿನ್ನೆಲೆಯಲ್ಲಿ ಏಳು ಯುಎನ್ ಸಂಸ್ಥೆಗಳೊಂದಿಗೆ ತನ್ನ ಸಂಬಂಧವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಅಮೆರಿಕವು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹಿಂದೆ ಸರಿದ ಬಳಿಕ ನಡೆದ ಪರಿಶೀಲನೆಯ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಯುಎನ್ ಸಂಸ್ಥೆಗಳಲ್ಲಿ ನಡೆಯುತ್ತಿರುವ ರಾಜಕೀಯೀಕರಣ ಮತ್ತು ಇಸ್ರೇಲ್ ವಿರೋಧಿ ವರದಿಗಳೇ ಈ ಕ್ರಮಕ್ಕೆ ಪ್ರಮುಖ ಕಾರಣವೆಂದು ಇಸ್ರೇಲ್ ತಿಳಿಸಿದೆ. ➤ ಇಸ್ರೇಲ್ ಸಂಬಂಧ ಕಡಿತಗೊಳಿಸಿದ ಯುಎನ್ ಸಂಸ್ಥೆಗಳು:-# ಈಗಾಗಲೇ ಸಂಪರ್ಕ ಕಡಿತಗೊಳಿಸಿದ ಸಂಸ್ಥೆಗಳು:1. ಮಕ್ಕಳು ಮತ್ತು ಸಶಸ್ತ್ರ ಸಂಘರ್ಷಗಳ ಕುರಿತ ಯುಎನ್ ವಿಶೇಷ ಪ್ರತಿನಿಧಿ ಕಚೇರಿ:- 2024ರಲ್ಲಿ ಇಸ್ರೇಲಿ ರಕ್ಷಣಾ ಪಡೆ (IDF) ಯನ್ನು ‘ಬ್ಲ್ಯಾಕ್‌ಲಿಸ್ಟ್’ ಮಾಡಿದ್ದ ಆರೋಪ- ಐಸಿಸ್ ಮತ್ತು ಬೋಕೊ ಹರಾಮ್ ಮುಂತಾದ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಇಸ್ರೇಲ್ ಅನ್ನು ಪಟ್ಟಿ ಮಾಡಲಾಗಿದೆ ಎಂಬ ಆಕ್ಷೇಪ2. ಯುಎನ್ ವುಮನ್ (UN Women / UNWOMEN):- 2023 ಅಕ್ಟೋಬರ್ 7ರಂದು ಇಸ್ರೇಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ಹಿಂಸೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂಬ ಆರೋಪ- 2024 ಜುಲೈನಲ್ಲಿ ಅಧಿಕೃತವಾಗಿ ಸಹಕಾರ ಒಪ್ಪಂದ ರದ್ದುಪಡಿಸಲಾಗಿದೆ3. ಯುಎನ್ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ (UNCTAD):- ಇಸ್ರೇಲ್ ವಿರೋಧಿ ಅನೇಕ ವರದಿಗಳನ್ನು ಪ್ರಕಟಿಸಿದ್ದ ಆರೋಪ- ಹಲವು ವರ್ಷಗಳಿಂದಲೇ ಇಸ್ರೇಲ್ disengaged ಆಗಿತ್ತು4. ಪಶ್ಚಿಮ ಏಷ್ಯಾ ಯುಎನ್ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCWA): ಪ್ರತಿವರ್ಷ ಇಸ್ರೇಲ್ ವಿರೋಧಿ ವರದಿಗಳನ್ನು ನೀಡುತ್ತದೆ ಎಂಬ ಆರೋಪ#  ಇತ್ತೀಚೆಗೆ ಸಂಪರ್ಕ ಕಡಿತಗೊಳಿಸಿದ ಹೆಚ್ಚುವರಿ ಸಂಸ್ಥೆಗಳು: 5.ಯುಎನ್ ಅಲಯನ್ಸ್ ಆಫ್ ಸಿವಿಲೈಸೇಶನ್ಸ್ (UN Alliance of Civilizations)- ಅಂತರಸಾಂಸ್ಕೃತಿಕ ಸಂವಾದದ ಉದ್ದೇಶ ಇದ್ದರೂ, ಇಸ್ರೇಲ್ ಅನ್ನು ಹೊರಗಿಟ್ಟು,- ಇಸ್ರೇಲ್ ವಿರೋಧಿ ವೇದಿಕೆಯಾಗಿ ಬಳಸಲಾಗಿದೆ ಎಂಬ ಆರೋಪ6. ಯುಎನ್ ಎನರ್ಜಿ (UN Energy)ಅಕಾರ್ಯಕ್ಷಮ ಮತ್ತು ಅನಾವಶ್ಯಕ ಬ್ಯೂರೋಕ್ರಸಿಯ ಉದಾಹರಣೆ ಎಂದು ಇಸ್ರೇಲ್ ಟೀಕೆ7. ಜಾಗತಿಕ ವಲಸೆ ಮತ್ತು ಅಭಿವೃದ್ಧಿ ವೇದಿಕೆ (Global Forum on Migration and Development)- ರಾಷ್ಟ್ರಗಳ ಸ್ವಾಯತ್ತ ವಲಸೆ ನೀತಿಯನ್ನು ದುರ್ಬಲಗೊಳಿಸುತ್ತದೆ ಎಂಬ ಆರೋಪ➤ ಇಸ್ರೇಲ್ ವಿದೇಶಾಂಗ ಸಚಿವಾಲಯವು ಇತರ ಯುಎನ್ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಕಾರ ಮುಂದುವರಿಸಬೇಕೇ ಎಂಬುದನ್ನು ಸಂಬಂಧಿತ ಸಚಿವಾಲಯಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಲಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳ ವಿರುದ್ಧ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ