➤ ಒಲಿಂಪಿಕ್ ಸ್ನೋಬೋರ್ಡಿಂಗ್ ಕ್ರೀಡೆಯನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದ್ದ ಸ್ವಿಸ್ ಕ್ರೀಡಾಪಟು ಯುಲಿ ಕೆಸ್ಟೆನ್ಹೋಲ್ಸ್ ಅವರು ಸ್ವಿಟ್ಜರ್ಲ್ಯಾಂಡ್‌ನ ಲೊಟ್ಷೆಂಟಲ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತ ದುರಂತದಲ್ಲಿ ಸಿಲುಕಿಕೊಂಡು ನಿಧನರಾದರು. 1998ರ ನಗಾನೋ ಒಲಿಂಪಿಕ್ಸ್‌ನಲ್ಲಿ ಸ್ನೋಬೋರ್ಡಿಂಗ್‌ನ ಮೊದಲ ಪದಕ ವಿಜೇತರಾಗಿದ್ದ ಅವರು, ಈ ಕ್ರೀಡೆಯನ್ನು ಒಲಿಂಪಿಕ್ ವೇದಿಕೆಗೆ ತರುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು. 50 ವರ್ಷ ವಯಸ್ಸಿನ ಅವರ ಅಕಾಲಿಕ ನಿಧನವು ಜಾಗತಿಕ ಕ್ರೀಡಾ ಸಮುದಾಯದಲ್ಲಿ ತೀವ್ರ ದುಃಖ ಮತ್ತು ಸಂತಾಪಕ್ಕೆ ಕಾರಣವಾಗಿದೆ. ➤ ಸ್ವಿಟ್ಜರ್ಲ್ಯಾಂಡ್‌ನ ವಲಾಯಿಸ್ ಕ್ಯಾಂಟನ್‌ನ ಲೊಟ್ಷೆಂಟಲ್ ಕಣಿವೆಯಲ್ಲಿ ಸುಮಾರು 2,400 ಮೀಟರ್ ಎತ್ತರದಲ್ಲಿ ಈ ಹಿಮಪಾತ ದುರಂತ ಸಂಭವಿಸಿದೆ. ಸ್ನೋಬೋರ್ಡಿಂಗ್ ವೇಳೆ ಯುಲಿ ಕೆಸ್ಟೆನ್ಹೋಲ್ಸ್ ಅವರು ಹಿಮಪಾತದಲ್ಲಿ ಸಿಲುಕಿಕೊಂಡರು, ಆದರೆ ಅವರ ಸಹ ಆಟಗಾರರು ಸುರಕ್ಷಿತವಾಗಿ ಪಾರಾದರು. ಕೆಸ್ಟೆನ್ಹೋಲ್ಸ್ ಅವರನ್ನು ರಕ್ಷಣಾ ತಂಡ ಹೆಲಿಕಾಪ್ಟರ್ ಮೂಲಕ ವಿಸ್‌ಪ್ ಹಾಗೂ ನಂತರ ಸಿಯೋನ್ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಈ ದುರ್ಘಟನೆ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ➤ ಒಲಿಂಪಿಕ್ ಮತ್ತು ಕ್ರೀಡಾ ಸಾಧನೆಗಳು:-=> 1998 ನಗಾನೋ ಚಳಿಗಾಲದ ಒಲಿಂಪಿಕ್ಸ್ನಲ್ಲಿ ನಡೆದ ಮೊದಲ ಸ್ನೋಬೋರ್ಡಿಂಗ್ ಸ್ಪರ್ಧೆಯಲ್ಲಿ (Parallel Giant Slalom) ಕಾಂಸ್ಯ ಪದಕ (Bronze Medal) ಗೆದ್ದು ಇತಿಹಾಸ ನಿರ್ಮಿಸಿದರು.=> ಸ್ನೋಬೋರ್ಡಿಂಗ್ ಅನ್ನು ಒಲಿಂಪಿಕ್ ಕ್ರೀಡೆಯಾಗಿ ಗುರುತಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು.=> 2002 ಸಾಲ್ಟ್ ಲೇಕ್ ಸಿಟಿ ಮತ್ತು 2006 ಟುರಿನ್ ಒಲಿಂಪಿಕ್ಸ್ಗಳಲ್ಲಿ ಸ್ವಿಟ್ಜರ್ಲ್ಯಾಂಡ್ ಪ್ರತಿನಿಧಿಸಿದರು.=> X Games 2003 ಮತ್ತು 2004ರಲ್ಲಿ ಸ್ನೋಬೋರ್ಡ್‌ಕ್ರಾಸ್ ವಿಭಾಗದಲ್ಲಿ ಎರಡು ಚಿನ್ನದ ಪದಕಗಳು.=> 14 ವಿಶ್ವಕಪ್ ಗೆಲುವುಗಳು ಅವರ ಖಾತೆಯಲ್ಲಿವೆ.=> 2006 ಟುರಿನ್ ಒಲಿಂಪಿಕ್ಸ್‌ನಲ್ಲಿ ಸ್ನೋಬೋರ್ಡ್‌ಕ್ರಾಸ್ ವಿಭಾಗದ ಪಯೋನಿಯರ್‌ಗಳಲ್ಲೊಬ್ಬರಾಗಿದ್ದರು.➤ 2006ರಲ್ಲಿ ಸ್ಪರ್ಧಾತ್ಮಕ ಕ್ರೀಡೆಯಿಂದ ನಿವೃತ್ತಿಯಾದ ಬಳಿಕವೂ ಅವರು ಸಕ್ರಿಯ ಸಾಹಸ ಕ್ರೀಡಾಪಟುವಾಗಿಯೇ ಉಳಿದರು. ಅವರು ಫ್ರೀರೈಡ್ ಸ್ನೋಬೋರ್ಡಿಂಗ್, ಸ್ಪೀಡ್‌ರೈಡಿಂಗ್, ಪ್ಯಾರಾಗ್ಲೈಡಿಂಗ್, ಕೈಟ್‌ಸರ್ಫಿಂಗ್, ಸ್ಕೈಡೈವಿಂಗ್, ಸರ್ಫಿಂಗ್, ವಿಂಗ್‌ಫಾಯಿಲಿಂಗ್ ಹಾಗೂ ಮೌಂಟನ್ ಬೈಕಿಂಗ್ ಗಳಲ್ಲಿ ತೊಡಗಿಸಿಕೊಂಡಿದ್ದರು. ಫ್ರೀರೈಡ್ ಸ್ನೋಬೋರ್ಡಿಂಗ್ ಪ್ರಕೃತಿಯ ಮಧ್ಯೆ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುವ ಕ್ರೀಡೆಯಾಗಿದ್ದು, ಆದರೆ ಹಿಮಪಾತದಂತಹ ಅಪಾಯಗಳು ಹೆಚ್ಚಾಗಿರುತ್ತವೆ.➤ ಸ್ವಿಸ್-ಸ್ಕೀ (Swiss-Ski) ಸಂಸ್ಥೆ ಅವರ ನಿಧನಕ್ಕೆ ಸಂತಾಪ ಸೂಚಿಸಿ,“ಸ್ವಿಸ್-ಸ್ಕೀ ಮತ್ತು ಸಂಪೂರ್ಣ ಸ್ನೋಬೋರ್ಡಿಂಗ್ ಸಮುದಾಯ ಶೋಕದಲ್ಲಿದೆ” ಎಂದು ಹೇಳಿದೆ.