➤ ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ವೀರ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಪ್ರತಿವರ್ಷ ಜನವರಿ 15 ರಂದು 'ಭಾರತೀಯ ಸೇನಾ ದಿನ' (Indian Army Day) ವನ್ನು ಆಚರಿಸಲಾಗುತ್ತದೆ. ಈ ವರ್ಷ (2026) ಭಾರತೀಯ ಸೇನೆಯು 78ನೇ ಸೇನಾ ದಿನವನ್ನು ಆಚರಿಸುತ್ತಿದ್ದು, ಇದು ದೇಶದ ಭದ್ರತೆ ಮತ್ತು ಆತ್ಮನಿರ್ಭರತೆಯ ಸಂಕೇತವಾಗಿದೆ. ➤ 2026 ರ ಭಾರತೀಯ ಸೇನಾ ದಿನದ ಥೀಮ್ "ನೆಟ್‌ವರ್ಕಿಂಗ್ ಮತ್ತು ಡೇಟಾ ಕೇಂದ್ರಿತತೆಯ ವರ್ಷ". ಈ ಥೀಮ್ ಸಂವಹನ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಯುದ್ಧಭೂಮಿ ದಕ್ಷತೆಯನ್ನು ಬಲಪಡಿಸಲು ಭಾರತೀಯ ಸೇನೆಯು ಡಿಜಿಟಲೀಕರಣ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯ ಮೇಲೆ ಕೇಂದ್ರೀಕರಿಸುವುದನ್ನು ಎತ್ತಿ ತೋರಿಸುತ್ತದೆ.➤ ಭಾರತೀಯ ಸೇನೆಯು ಬ್ರಿಟಿಷ್ ಆಳ್ವಿಕೆಯಲ್ಲಿ ಏಪ್ರಿಲ್ 1, 1895 ರಂದು ಸ್ಥಾಪನೆಯಾಯಿತು. ಆದರೆ, 1949 ಜನವರಿ 15 ರಂದು, ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತದ ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಅವರು ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಕೆ.ಎಂ. ಕರಿಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಐತಿಹಾಸಿಕ ಘಟನೆಯ ನೆನಪಿಗಾಗಿ ಪ್ರತಿವರ್ಷ ಸೇನಾ ದಿನವನ್ನು ಆಚರಿಸಲಾಗುತ್ತದೆ. ➤ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಶಕ್ತಿ ಪ್ರದರ್ಶನ: ಈ ದಿನದಂದು ದೆಹಲಿ ಮತ್ತು ವಿವಿಧ ಕಮಾಂಡ್ ಕೇಂದ್ರಗಳಲ್ಲಿ ಪೆರೇಡ್, ಸಾಹಸ ಪ್ರದರ್ಶನಗಳ ಮೂಲಕ ಸೇನೆಯ ಶಿಸ್ತು ಮತ್ತು ಬಲವನ್ನು ಪ್ರದರ್ಶಿಸಲಾಗುತ್ತದೆ. 2026ರ ವಿಶೇಷ: ಈ ವರ್ಷದ ಮುಖ್ಯ ಪರೇಡ್ ಮಹಲ್ ರಸ್ತೆಯಲ್ಲಿ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಭಾಗವಹಿಸಲಿದ್ದಾರೆ.➤ ಭವಿಷ್ಯದ ಯುದ್ಧಭೂಮಿ – ತಂತ್ರಜ್ಞಾನ:-=> ಎಕ್ಸೋಸ್ಕೆಲೆಟನ್‌ಗಳು: ಸೈನಿಕರ ಶಕ್ತಿ ಮತ್ತು ಸಹನಶೀಲತೆ ಹೆಚ್ಚಳ=> ಸ್ವಯಂಚಾಲಿತ ಯುದ್ಧ ವಾಹನಗಳು (ACVs): ಮಾನವ ಹಾನಿ ಕಡಿತ=> ಕೃತಕ ಬುದ್ಧಿಮತ್ತೆ (AI): ವೇಗವಾದ, ನಿಖರ ಯುದ್ಧ ನಿರ್ಧಾರಗಳುಇವುಗಳಿಂದ ಯುದ್ಧದಲ್ಲಿ ಮಾನವ ಹಾನಿ ಕಡಿಮೆಯಾಗಲಿದ್ದು, ಸೇನೆಯ ಕಾರ್ಯಕ್ಷಮತೆ ಹೆಚ್ಚಾಗಲಿದೆ.➤ "ಸೇವಾ ಪರಮೋ ಧರ್ಮಃ" ಎಂಬ ಮಂತ್ರದೊಂದಿಗೆ ಕಾರ್ಯನಿರ್ವಹಿಸುವ ಭಾರತೀಯ ಸೇನೆಯು ಇಂದು ಆಧುನಿಕ ತಂತ್ರಜ್ಞಾನವನ್ನು ಅಪ್ಪಿಕೊಳ್ಳುವ ಮೂಲಕ ಜಗತ್ತಿನ ಬಲಿಷ್ಠ ಸೇನೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ.