* ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಮುಂದಿನ ರಾಯಭಾರಿ/ಖಾಯಂ ಪ್ರತಿನಿಧಿಯಾಗಿ  ಅನುಭವಿ ರಾಜತಾಂತ್ರಿಕ ಪರ್ವತನೇನಿ ಹರೀಶ್ ಅವರನ್ನು ನೇಮಕ ಮಾಡಿದೆ. * 1990ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಹರೀಶ್ ಪ್ರಸ್ತುತ ಜರ್ಮನಿಯಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರುಚಿರಾ ಕಾಂಬೋಜ್ ಅವರು ಜೂನ್‌ನಲ್ಲಿ ನಿವೃತ್ತರಾದ ನಂತರ ಭಾರತದ ರಾಯಭಾರಿ ಅಥವಾ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯ ಸ್ಥಾನವು ಖಾಲಿಯಾಗಿದೆ.