* ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಜ್ಯಗಳ ರಾಜ್ಯಧಾನಿಗಳಲ್ಲಿ ರಾಷ್ಟ್ರಧ್ವಜಾರೋಹಣ ಗೌರವ ದೊರೆತು 50 ವರ್ಷ ಪೂರ್ಣಗೊಂಡಿವೆ.* ದೇಶಕ್ಕೆ ಸ್ವಾತ್ಯಂತ್ರ ದೊರೆತ 27 ವರ್ಷಗಳ ವರೆಗೆ ರಾಜ್ಯಗಳಲ್ಲಿ ಸ್ವಾತಂತ್ರ್ಯ ದಿನದಂದು ಮತ್ತು ಗಣರಾಜ್ಯದಿನದಂದು ತ್ರಿವರ್ಣ ಧ್ವಜಾರೋಹಣ ನೆರೆವೇರಿಸುವ ಅಧಿಕಾರ ಆಯಾ ರಾಜ್ಯಗಳ ರಾಜ್ಯಪಾಲರಿಗೆ ಇತ್ತು. 1974ರಲ್ಲಿ ಮುಖ್ಯಮಂತ್ರಿಗಳಿಗೆ ತ್ರಿವರ್ಣ ಧ್ವಜಾರೋಹಣ ನೆರೆವೇರಿಸುವ ಅಧಿಕಾರ ದೊರಕಿತು.* ಮುಖ್ಯಮಂತ್ರಿಗಳಿಗೆ ಈ ಅವಕಾಶ ದೊರೆಯಲು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಕಾರಣರಾಗಿದ್ದಾರೆ. ತ್ರಿವರ್ಣ ಧ್ವಜಾರೋಹಣದ ಅವಕಾಶ ರಾಜ್ಯಪಾಲರಿಗೆ ಮಾತ್ರ ಇರುವುದು ಕರುಣಾನಿಧಿ ಅವರನ್ನು ಕೆರಳಿಸಿತ್ತು.*  ಈ ಕುರಿತು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ 1974ರ ಫೆಬ್ರುವರಿಯಲ್ಲಿ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಜುಲೈನಲ್ಲಿ ಈ ಕುರಿತು ಆದೇಶ ಹೊರಡಿಸಿದ ಕೇಂದ್ರಸರ್ಕಾರ 'ಸ್ವಾತಂತ್ರ್ಯ, ದಿನಾಚರಣೆ ದಿನದಂದು ರಾಜ್ಯಗಳಲ್ಲಿ ಮುಖ್ಯಮಂತ್ರಿಯವರು ರಾಷ್ಟ್ರಧ್ವಜಾರೋಹಣ ಮಾಡಬೇಕು' ಎಂದು ಹೇಳಿತು. ಗಣರಾಜ್ಯೋತ್ಸವ ದಿನದಂದು ಈ ಗೌರವ ರಾಜ್ಯಪಾಲರ ಬಳಿಯೇ ಉಳಿಯಿತು. ಹೀಗಾಗಿ 50 ವರ್ಷಗಳ ಹಿಂದೆ ಮುಖ್ಯಮಂತ್ರಿಗಳು ಮೊದಲ ಬಾರಿಗೆ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು.