* ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್ ನಲ್ಲಿ 1000 ದರ್ಜೆಯ ಬ್ಯಾಡ್ಮಿಂಟನ್ ಟೂರ್ನಿಯನ್ನು ಗೆದ್ದುಕೊಂಡ ಭಾರತದ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಜೂನ್ 20 ರಂದು (ಮಂಗಳವಾರ) ಪ್ರಕಟವಾಗಿರುವ ಬಿಡ ಬ್ಲ್ಯುಎಫ್ ರ‍್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.* ಇಂಡೊನೇಷ್ಯಾದಲ್ಲಿ ಭಾನುವಾರ ನಡೆದ ವಿಶ್ವ ಟೂರ್ ಸೂಪರ್ : 1000 ಟೂರ್ನಿಯ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್, ಮಲೇಷ್ಯಾದ ಆರನ್ ಚಿಯಾ ಸೊ ವೊಯಿ ಯೆಕ್' ಜೋಡಿಯನ್ನು ನೇರ ಸೆಟ್‌ಗಳಿಂದ ಸೋಲಿಸಿ ಭಾರತದ ಆಟಗಾರರು ನಾಲ್ಕನೇ ಸ್ಥಾನದಲ್ಲಿದ್ದರು.* 2023 ರಲ್ಲಿ ಚಿರಾಗ್ ಶೆಟ್ಟಿ ಮತ್ತು ರಣಕಿರೆಡ್ಡಿ ಯವರು ಎರಡು ವಿಶ್ವ ಟೂರ್ ಪ್ರಶಸ್ತಿಗಳ ಜೊತೆಗೆ ಸ್ವಿಸ್ ಓಪನ್ ಮತ್ತು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.