Job Description: * ಪ್ರತಿ ವರ್ಷ ಜೂನ್ 21ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ವಿಶ್ವಕ್ಕೆ ಭಾರತೀಯರು ಕೊಟ್ಟ ಅದ್ಭುತ ಕೊಡುಗೆ ಯೋಗ, ಭಾರತೀಯ ಸಂಸ್ಕೃತಿಯಲ್ಲಿ ಯೋಗ ಪ್ರಾಚೀನ ಕಾಲದಲ್ಲೇ ಇತ್ತು.* 2023ರ ಯೋಗ ದಿನಾಚರಣೆಯ ಥೀಮ್ “ವಸುಧೈವ ಕುಟುಂಬಕಂ”.* ಅಧಿಕ ರಕ್ತದೊತ್ತಡ, ದೇಹದ ತೂಕ ನಿಯಂತ್ರಣ, ದೈಹಿಕ ಸಾಮರ್ಥ್ಯ ಹೆಚ್ಚಳ ಮುಂತಾದವುಗಳಿಗೆ ಸಹಾಯ ಮಾಡುವುದಲ್ಲದೇ ಪದೇ ಪದೇ ಕಾಡುವ ಸ್ನಾಯುಸೆಳೆತ ಸಮಸ್ಯೆ ನಿವಾರಿಸಿಕೊಳ್ಳಬಹುದು. ಯೋಗದ ಮೂಲಕ ಏಕಾಗ್ರತೆ ಹಲವು ಮಾನಸಿಕ ಸಮಸ್ಯೆ ನಿವಾರಣೆಗೆ ದಾರಿ. ಹಾಗಾಗಿ ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಹೇಳಲಾಗುತ್ತದೆ.* ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಜೂನ್ 21 ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ.