* ಅಖಿಲ ಭಾರತ ಟೆನಿಸ್ ಸಂಸ್ಥೆಯು ಏಷ್ಯನ್ ಕ್ರೀಡಾ ಕೂಟಕ್ಕೆ 12 ಸದಸ್ಯರ ತಂಡವನ್ನು ಜೂನ್ 20 ರಂದು  (ಮಂಗಳವಾರ) ಪ್ರಕಟಿಸಿದ್ದು, ಡಬಲ್ಸ್ ಪರಿಣತ ರೋಹನ್ ಬೋಪಣ್ಣ ಅವರು ಭಾರತದ ಸವಾಲಿನ ನೇತೃತ್ವ ವನ್ನು ವಹಿಸಲಿದ್ದಾರೆ.* ಏಷ್ಯನ್ ಗೇಮ್ಸ್ ಚೀನಾದ ಹಾಂಗ್‌ ಔದಲ್ಲಿ ಸೆಪ್ಟೆಂಬರ್. 23 ರಂದು ಕ್ರೀಡಾಕೂಟ ಆರಂಭವಾಗಲಿದ್ದು, 43 ವರ್ಷದ ಡಬಲ್ಸ್ ಪರಿಣತ ರೋಹನ್ ಬೋಪಣ್ಣ ಅವರು ರಾಮಕುಮಾರ ರಾಮನಾಥನ್ ಜೊತೆಗೂಡಿ ಡಬಲ್ಸ್‌ನಲ್ಲಿ ಆಡಲಿದ್ದಾರೆ. * 2018ರ ಏಷ್ಯನ್ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ಜಕಾರ್ತಾದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಅಂಕಿತಾ ರೈನಾ ಅವರು ಮಹಿಳಾ ತಂಡದ ನೇತೃತ್ವ ವಹಿಸಲಿದ್ದಾರೆ.