* ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ನಂದನ್ ನಿಲೇಕಣಿ ಅವರು ಬಾಂಬೆ ಐಐಟಿಗೆ 315 ಕೋಟಿ ದೇಣಿಗೆ ನೀಡಲಾಗಿದ್ದು, ಈ ಹಿಂದೆ 85 ಕೋಟಿ ದೇಣಿಗೆಯನ್ನೂ ಸೇರಿಸಿದರೆ ಅತಿ ಹೆಚ್ಚು ದೇಣಿಗೆ ನೀಡಿರುವ ಹಳೆಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.* ನನಗೆ ಉತ್ತಮ ಜೀವನ ಕೊಟ್ಟ ಸ್ಥಳಕ್ಕೆ ಸಮರ್ಪಿಸುತ್ತಿರುವ ಕೊಡುಗೆ ಹಾಗೂ ನಾಳಿನ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಬದ್ಧತೆ ಇದಾಗಿದೆ' ಎಂದು ನಂದನ್ ನಿಲೇಕಣಿ ಅವರು ತಿಳಿಸಿದ್ದಾರೆ.* ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳನ್ನು ಸುಸ್ಥಿರವಾದ ಸುಧಾರಣೆ ಬದಲಾವಣೆಗೆ ಸಹಾಯವಾಗಲಿದೆ ಎಂಬ ಆಶಯವನ್ನು ಐಐಟಿ ಬಾಂಬೆಯ ನಿರ್ದೇಶಕರಾದ ಪ್ರೊ. ಸುಭಾಸಿಸ್ - ಚೌಧರಿ ಅವರು ವ್ಯಕ್ತಪಡಿಸಿದರು.