* ಸ್ವಾಮಿನಾಥನ್ ಜಾನಕಿರಾಮನ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank of India )ದ ಡೆಪ್ಯುಟಿ ಗವರ್ನರ್ ಆಗಿ ಕೇಂದ್ರ ಸರ್ಕಾರ ಮಂಗಳವಾರ ನೇಮಕ ಮಾಡಿದೆ. * ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಾನಕಿರಾಮನ್ ಅವರ ಅಧಿಕಾರಾವಧಿ ಜೂನ್ 22 ರಂದು ಕೊನೆಗೊಳ್ಳಲಿದ್ದು, ಮಹೇಶ್ ಕುಮಾರ್ ಜೈನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.