Job Description: * ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ 25 ವರ್ಷದ ಲವ್ಲಿನಾ ರವರು ಮಾರ್ಚ್ 26 ರಂದು ನಡೆದ ಅವರು 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯಾದ ಬ್ಲಿಸ್ ಪಾರ್ಕರ್ ವಿರುದ್ಧ ಗೆದ್ದರು. ಈ ಹಿಂದೆ ಎರಡು ಸಲ ಕಂಚು ಗೆದ್ದಿದ್ದರು, ಈಗ ನಾಲ್ಕನೇ ಪ್ರಯತ್ನದಲ್ಲಿ ಚಾಂಪಿಯನ್ ಆದರು. * ಲವ್ಲಿನಾ ರವರು “ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆ ತಂದಿರುವುದು ಸಂತಸ ಉಂಟುಮಾಡಿದೆ' ಎಂದು ಫೈನಲ್ ಬಳಿಕ ಭಾವುಕರಾಗಿ ನುಡಿದರು. 'ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಹಾಗೂ ಒಲಿಂಪಿಕ್ಸ್‌ನಲ್ಲಿ ಒಂದು ಕಂಚು ಗೆದ್ದಿದ್ದೇನೆ. ಚಿನ್ನ ಗೆಲ್ಲಲು ಕಠಿಣ ಪ್ರಯತ್ನ ನಡೆಸಿದ್ದೆ, ನನ್ನ ಗುರಿ ಈಡೇರಿದೆ' ಎಂದರು.