* ಭಾರತದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಯುಪಿಐ ಕ್ರಾಂತಿ ತಂದಂತೆ, ಈಗ ವಿಳಾಸ ವ್ಯವಸ್ಥೆಯಲ್ಲೂ ಯುಪಿಐ ಮಾದರಿಯ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ‘ಧ್ರುವ ಡಿಜಿಟಲ್ ಅಡ್ರೆಸ್’ (DHRUVA – Digital Hub for Reference and Unique Virtual Address) ಎಂಬ ಹೊಸ ಪರಿಕಲ್ಪನೆಯನ್ನು ಅಳವಡಿಸಲಾಗುತ್ತಿದೆ. ಇದರಿಂದ ದೇಶದ ಪ್ರತಿಯೊಬ್ಬ ನಾಗರಿಕರು, ಮನೆಗಳು ಮತ್ತು ಸಂಸ್ಥೆಗಳು ಸರಳ, ಏಕೀಕೃತ ಹಾಗೂ ನಿಖರ ಡಿಜಿಟಲ್ ವಿಳಾಸವನ್ನು ಹೊಂದುವಂತಾಗುತ್ತದೆ.* ಈ ವ್ಯವಸ್ಥೆಯಲ್ಲಿ, ದೀರ್ಘ ಹಾಗೂ ಗೊಂದಲಕಾರಿ ವಿಳಾಸಗಳ ಬದಲು, ಯುಪಿಐ ಐಡಿ ತರಹದ ಸಂಕ್ಷಿಪ್ತ, ಯುನಿಕ್ ಡಿಜಿಟಲ್ ವಿಳಾಸವನ್ನು ನೀಡಲಾಗುತ್ತದೆ. ಈ ವಿಳಾಸವನ್ನು ಅಂಚೆ ವಿತರಣೆ, ಸರ್ಕಾರಿ ಸೇವೆಗಳು, ಇ-ಕಾಮರ್ಸ್ ವಿತರಣಾ ವ್ಯವಸ್ಥೆಗಳು, ತುರ್ತು ಸೇವೆಗಳು ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ.* ಧ್ರುವ (DHRUVA) ಎಂದರೆ ಭೌತಿಕ ವಿಳಾಸದ ಗೊಂದಲವನ್ನು ನಿವಾರಿಸಿ, ಪ್ರತಿಯೊಂದು ಸ್ಥಳಕ್ಕೂ ಯುನಿಕ್ ವರ್ಚುವಲ್ ಅಡ್ರೆಸ್ ನೀಡುವ ಮೂಲಕ ವಿಳಾಸ ಹಂಚಿಕೆಯನ್ನು ಸುಲಭ, ನಿಖರ ಮತ್ತು ವೇಗವಾಗಿಸುವ ಡಿಜಿಟಲ್ ವ್ಯವಸ್ಥೆ.* ಡಿಜಿಪಿನ್ (DIGIPIN) – ಪ್ರಮುಖ ಅಂಶಗಳು  :- ದೇಶದ ಪ್ರತಿಯೊಂದು 12 ಚದರ ಮೀಟರ್ ಪ್ರದೇಶಕ್ಕೆ ಒಂದು ಡಿಜಿಪಿನ್- 10 ಅಕ್ಷರಗಳ ಆಲ್ಫಾ-ನ್ಯುಮೆರಿಕ್ ಕೋಡ್- ಓಪನ್ ಸೋರ್ಸ್ ಲೊಕೇಶನ್ ಪಿನ್ ಸಿಸ್ಟಂ- ಗೂಗಲ್ ಮ್ಯಾಪ್ ಲೊಕೇಶನ್ ಶೇರ್ ಮಾಡುವ ತಂತ್ರಜ್ಞಾನಕ್ಕೆ ಸಮಾನ- ಡಿಜಿಪಿನ್ ನೀಡಿದರೆ ಸ್ಥಳದ ನಿಖರ ನಕ್ಷೆ ತಕ್ಷಣ ಲಭ್ಯವಾಗುವುದು. * ಧ್ರುವದಲ್ಲಿನ ಲೇಬಲ್ / ಪ್ರಾಕ್ಸಿ ಅಡ್ರೆಸ್ ವ್ಯವಸ್ಥೆ ಯುಪಿಐ ಮಾದರಿಯಲ್ಲಿ ಕಾರ್ಯನಿರ್ವಹಿಸಿ, ವ್ಯಕ್ತಿಯ ಹೆಸರಿನಲ್ಲಿ ರಚಿಸಿದ ಡಿಜಿಟಲ್ ಲೇಬಲ್‌ಗೆ ಡಿಜಿಪಿನ್ ಹಾಗೂ ಭೌತಿಕ ವಿಳಾಸವನ್ನು ಲಿಂಕ್ ಮಾಡುವ ಮೂಲಕ, ವಿಳಾಸ ನೀಡಲು ಕೇವಲ ಆ ಲೇಬಲ್ ಸಾಕಾಗುವಂತೆ ಮಾಡುತ್ತದೆ.* ಧ್ರುವದಿಂದ ಆಗುವ ಪ್ರಯೋಜನಗಳು:- - ಡೆಲಿವರಿ ಸೇವೆಗಳು ಹೆಚ್ಚು ವೇಗ ಮತ್ತು ನಿಖರ- ಕ್ಯಾಬ್ ಚಾಲಕರಿಗೆ ಸ್ಥಳ ಹುಡುಕುವುದು ಸುಲಭ- ಅಂಚೆ ಸೇವೆಗಳಲ್ಲಿ ವಿಳಾಸ ಗೊಂದಲ ನಿವಾರಣೆ- ಅನೌಪಚಾರಿಕ ಅಥವಾ ಸ್ಪಷ್ಟ ವಿಳಾಸ ಇಲ್ಲದ ಪ್ರದೇಶಗಳಿಗೂ ಪರಿಹಾರ-  ತುರ್ತು ಸೇವೆಗಳಿಗೆ ನಿಖರ ಲೊಕೇಶನ್ ಲಭ್ಯ* ಧ್ರುವ ಮಹತ್ವದ ಯೋಜನೆಯಾಗಿರುವುದಕ್ಕೆ ಕಾರಣ, ಇದು ಭೌತಿಕ ವಿಳಾಸದ ಅವಲಂಬನೆಯನ್ನು ಕಡಿಮೆ ಮಾಡಿ ವಿಳಾಸದ ತಪ್ಪು ಮತ್ತು ವಿಳಂಬಗಳಿಗೆ ಅಂತ್ಯ ತರಲು ಸಹಾಯ ಮಾಡುವುದರೊಂದಿಗೆ ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಬಲ ನೀಡಿ ಸ್ಮಾರ್ಟ್ ಗವರ್ನನ್ಸ್ ಹಾಗೂ ಲಾಜಿಸ್ಟಿಕ್ಸ್‌ಗೆ ಉತ್ತೇಜನ ನೀಡುತ್ತದೆ.* ಸಂಕ್ಷಿಪ್ತವಾಗಿ ಹೇಳುವುದಾದರೆ, ಧ್ರುವ (DHRUVA) ಭಾರತದ ವಿಳಾಸ ವ್ಯವಸ್ಥೆಯನ್ನು ಡಿಜಿಟಲ್ ಯುಗಕ್ಕೆ ತರುವ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಮೇನ್ ರೋಡ್ ಅಥವಾ ಲ್ಯಾಂಡ್‌ಮಾರ್ಕ್ ಇಲ್ಲದೆ ಕೇವಲ ಒಂದು ಡಿಜಿಟಲ್ ಅಡ್ರೆಸ್ ಸಾಕು. ಧ್ರುವ ಒಂದು ಭಾರತದ ಹೊಸ ಡಿಜಿಟಲ್ ದಿಕ್ಕಾಗಲಿದೆ .