* ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿರುವ - ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯನ್ನಾಗಿ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ನೇಮಕ ಮಾಡಿ ಎಂದು ರಾಷ್ಟ್ರಪತಿ ಅದೇಶ ಹೊರಡಿಸಿದ್ದಾರೆ.* ಇದುವರೆಗೂ ಎನ್.ಆರ್. ಶೆಟ್ಟಿ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದರು. ಅವರ ಅವಧಿ ಮುಗಿದಿದ್ದರಿಂದ ವಿಜಯ್ ಗೋಖಲೆ ಅವರನ್ನು ನೇಮಕ ಮಾಡಲಾಗಿದೆ ಎಂದು ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಗೆ. ಬಿರಾದಾರ ಅವರು ತಿಳಿಸಿದ್ದಾರೆ.* ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭವಾದ ಬಳಿಕ ಗೋಖಲೆ ಅವರು ಮೂರನೇ ಕುಲಾಧಿಪತಿಯಾಗಿದ್ದು, ಯು.ಆರ್. ಅನಂತಮೂರ್ತಿ ಅವರು ಮೊದಲ ಕುಲಾಧಿಪತಿಯಾಗಿದ್ದರು.