*  ತೆಲಂಗಾಣ ಚುನಾವಣಾ ಆಯೋಗವು ಈ ಭಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಮಂಗಳಮುಖಿಯರಿಗೂ ಸ್ಥಾನ ನೀಡಲಾಗುತ್ತಿದ್ದು ಮಂಗಳಮುಖಿ ಲೈಲಾ ಅವರನ್ನು ಚುನಾವಣೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.* ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ  ನಟರು, ಸೆಲೆಬ್ರೆಟಿಗಳ ಬದಲಾಗಿ ಮಂಗಳಮುಖಿಯರಿಗೆ ಸ್ಥಾನ ನೀಡಲಾಗುತ್ತಿದೆ.* ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಮಾನ್ಯತೆ ನೀಡಲಾಗಿದೆ. * ಲೈಲಾ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಕಾಕತೀಯ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪೂರ್ಣಗೊಳಿಸಿದ್ದಾರೆ. ಮತ್ತು ಅವರು ಮಂಗಳಮುಖಿಯರ ಹಕ್ಕುಗಳಿಗಾಗಿ ಎನ್‌ಜಿಒವೊಂದನ್ನು ಆರಂಭಿಸಿದ್ದಾರೆ.