* ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಆನ್‌ಲೈನ್‌ ಎಜುಟೆಕ್‌ ಸಂಸ್ಥೆ ಬೈಜೂಸ್‌ನ ನೂತನ ಭಾರತೀಯ ವ್ಯವಹಾರಗಳ ಸಿಇಒ ಆಗಿ ಅರ್ಜುನ್‌ ಮೋಹನ್‌ ಅವರನ್ನು ನೇಮಕ ಮಾಡಲಾಗಿದೆ. * ಬೈಜೂಸ್ ನ ಹಾಲಿ ಸಿಇಒ ಮತ್ತು ಬೈಜೂಸ್‌ ಸ್ಥಾಪಕ ಬೈಜು ರವೀಂದ್ರನ್‌ ಅವರ ಆಪ್ತ ಮೃಣಾಲ್‌ ಮೋಹಿತ್‌ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸಿದ ಹಿನ್ನೆಲೆಯಲ್ಲಿ ನೂತನ ಭಾರತೀಯ ವ್ಯವಹಾರಗಳ ಸಿಇಒ ಆಗಿ ಅರ್ಜುನ್‌ ಮೋಹನ್‌ ಅವರನ್ನು ನೇಮಕ ಮಾಡಲಾಗಿದೆ.* ಬೈಜೂಸ್ ನ ನೂತನ ಸಿಇಒ ಆಗಿ ಅರ್ಜುನ್ ಮೋಹನ ಅವರು ಬೈಜೂಸ್ ನ ಚೀಫ್ ಬಿಸ್ನೆಸ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ.* ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬದಲಾವಣೆಗೆ ಖಚಿತ ಕಾರಣ ತಿಳಿದುಬಂದಿಲ್ಲ. ಆದರೆ, ಸಂಸ್ಥೆಯು ತನ್ನ ಅಧಿಕೃತ ಪ್ರಕಟಣೆಯಲ್ಲಿ, "ಮೃಣಾಲ್‌ ಮೋಹಿತ್‌ ಅವರು ವೈಯಕ್ತಿಕ ಕಾರಣಗಳಿಂದ ಹೊಸ ಪಯಣ ಆರಂಭಿಸಲು ಉದ್ದೇಶಿಸಿದ್ದಾರೆ," ಎಂದು ತಿಳಿಸಿದೆ. * ಕೆಲ ತಿಂಗಳ ಹಿಂದೆ ಬೈಜೂಸ್ ಕಂಪನಿಯ ಸಲಹೆಗಾರರಾಗಿ ಟಿವಿ ಮೋಹನ್‌ದಾಸ್‌ ಪೈ ಹಾಗೂ ಎಸ್‌ಬಿಐನ ಮಾಜಿ ಮುಖ್ಯಸ್ಥ ರಜನೀಶ್‌ ಕುಮಾರ್‌ ಅವರನ್ನೂ ನೇಮಕ ಮಾಡಲಾಗಿತ್ತು.