* ವಿಜ್ಞಾನಿ ವಿಭವ್ ಕುಮಾರ್ ತಾಲುಕ್‌ ದಾರ್ ಅವರಿಗೆ ''ದ ಹ್ಯಾರಿ ಮೆಸೆಲ್' ಅಂತಾರಾಷ್ಟ್ರೀಯ ಗೌರವ ಲಭಿಸಿದೆ. ಘಂಡಾಮೃಗಗಳ ಸಂರಕ್ಷಣೆಗಾಗಿ ವಿಭವ್ ಕುಮಾರ್ ಕೈಗೊಂಡಿರುವ ಕ್ರಮಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. * ಅಬುಧಾಬಿಯಲ್ಲಿ ನಡೆಯುತ್ತಿರುವ ಪರಿಸರ ಸಂರಕ್ಷಣಾ ಅಂತಾರಾಷ್ಟ್ರೀಯ ಒಕ್ಕೂಟದ (ಐಯುಸಿಎನ್) ಸಭೆಯಲ್ಲಿ ತಾಲೂಕ್‌ದಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.* 2020ರಲ್ಲಿ ಅಸ್ಸಾಂ ಸರಕಾರ ರೂಪಿಸಿದ್ದ ಭಾರತದಲ್ಲಿನ ಫೇಂಡಾಮೃಗಗಳ ಸಂರಕ್ಷಣಾ ಯೋಜನೆಗೆ ತಾಲೂಕ್‌ದಾ‌ರ್ ಸಹಕಾರ ನೀಡಿದ್ದರು. ಇವರು ಈಶಾನ್ಯ ಭಾರತದಲ್ಲಿನ ಜೀವವೈವಿಧ್ಯ ಸಂರಕ್ಷಣೆಗಾಗಿ ಸ್ಥಾಪಿಸಿದ್ದ ಅರಣ್ಯಕ್ ಎಂಬ ಸರಕಾರೇತರ ಸಂಸ್ಥೆಯ ಸಿಇಒ ಕೂಡ ಆಗಿದ್ದಾರೆ. * ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಅವರು ಕಳೆದ 25 ವರ್ಷಗಳಲ್ಲಿ ಸುಮಾರು 60 ಯೋಜನೆಗಳನ್ನು ಕೈಗೊಂಡಿದ್ದಾರೆ ಮತ್ತು 70ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. * ಅಸ್ಸಾಂ ಫೇಂಡಾಮೃಗಗಳ ಆವಾಸಸ್ಥಾನವಾಗಿದೆ. ಜಗತ್ತಿನಲ್ಲಿರುವ ಒಟ್ಟು ಘಂಡಾಮೃಗಗಳ ಪೈಕಿ ಶೇ.80ರಷ್ಟು ಅಸ್ಸಾಂನಲ್ಲಿವೆ. ಇಲ್ಲಿ ಪ್ರಸ್ತುತ 4014 ಫೇಂಡಾಮೃಗಗಳು ಇವೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಅಸ್ಸಾಂನ ಕಾಝಿರಂಗ, ಮನಾಸ್ ರಾಷ್ಟ್ರೀಯ ಉದ್ಯಾನವನ ಹಾಗೂ ಪ್ರೊಬಿತೋರಾ ನಲ್ಲಿ ಫೇಂಡಾಮೃಗಗಳು ವಾಸಿಸುತ್ತವೆ.