* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಮೇರಿಕಾದ ವಾಷಿಂಗ್ಟನ್‌ನಲ್ಲಿ ನಡೆದ 31 ನೇ ವಾರ್ಷಿಕ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗಳಲ್ಲಿ ಗ್ಲೋಬಲ್ ಫೈನಾನ್ಸ್ ಮ್ಯಾಗಜೀನ್‌ನಿಂದ 2024 ರ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಹೆಸರಿಸಿದೆ. * ಎಸ್‌ಬಿಐ ಅಧ್ಯಕ್ಷ ಸಿಎಸ್ ಸೆಟ್ಟಿ ಅವರು ರಾಷ್ಟ್ರವ್ಯಾಪಿ ಅಸಾಧಾರಣ ಸೇವೆಗಳು ಮತ್ತು ಹಣಕಾಸು ಸೇರ್ಪಡೆಗೆ ಬ್ಯಾಂಕ್‌ನ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು.* 'ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಗ್ರಾಹಕರ ವಿಶ್ವಾಸಾರ್ಹತೆ ಗಳಿಸುವ ಮೂಲಕ  ಆರ್ಥಿಕತೆಯಲ್ಲಿ ಅವರನ್ನು ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುತ್ತಿದೆ. ಬ್ಯಾಂಕ್‌ನ ಬದ್ಧತೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ' ಎಂದು ಎಸ್‌ಬಿಐ ತಿಳಿಸಿದೆ.* ವಿಶ್ವದ ಅತ್ಯುತ್ತಮ ಬ್ಯಾಂಕು ಗಳ ಪಟ್ಟಿ :- ಅತ್ಯುತ್ತಮ ಬ್ಯಾಂಕು: ಜೆಪಿ ಮಾರ್ಗನ್ ಚೇಸ್- ಅತ್ಯುತ್ತಮ ಕಾರ್ಪೊರೇಟ್ ಬ್ಯಾಂಕ್: ಬಿಬಿವಿಎ- ಅತ್ಯುತ್ತಮ ಕನ್ಸೂಮರ್ ಬ್ಯಾಂಕ್: ಸ್ಟಾಂಡರ್ಡ್ ಚಾರ್ಟಡ್- ಅತ್ಯುತ್ತಮ ಉದಯೋನ್ಮುಖ ಮಾರು ಕಟ್ಟೆಗಳ ಬ್ಯಾಂಕ್: ಕ್ಯೂಎನ್‌ಬಿ- ಅತ್ಯುತ್ತಮ ಫ್ರಾಂಟಿಯರ್ ಮಾರ್ಕೆಟ್ ಬ್ಯಂಕ್: ಯುಬಿಎ- ಅತ್ಯುತಮ ಸಬ್-ಕಸ್ಟಡಿಯನ್ ಬ್ಯಾಂಕ್: ಸಿಐಬಿಸಿ ಮೆಲ್ಲೋನ್- ಅತ್ಯುತ್ತಮ ಟ್ರಾನ್ಸಾಕ್ಷನ್ ಬ್ಯಾಂಕ್: ಬ್ಯಾಂಕ್ ಆಫ್ ಅಮೆರಿಕ- ಅತ್ಯುತ್ತಮ ಸಸ್‌ಟೈನಬಲ್ ಫೈನಾನ್ಸ್ ಬ್ಯಾಂಕ್: ಸೊಸೈಟೆ ಜನರೇಲ್- ಅತ್ಯುತ್ತಮ ಇಸ್ಲಾಮಿಕ್ ಫೈನಾನ್ಸಿಯಲ್ ಇನ್ಸ್‌ಟಿಟ್ಯೂಶನ್: ಕುವೇತ್ ಫೈನಾನ್ಸ್ ಹೌಸ್- ಅತ್ಯುತ್ತಮ ಕ್ಯಾಷ್ ಮ್ಯಾನೇಜೆಂಟ್ ಬ್ಯಾಂಕ್: ಸಿಟಿ ಬ್ಯಾಂಕ್- ಅತ್ಯುತ್ತಮ ಫಾರೀನ್ ಎಕ್ಸ್‌ಚೇಂಜ್ ಸರ್ವಿಸ್: ಯುಬಿಎಸ್- ಅತ್ಯುತ್ತಮ ಎಸ್‌ಎಂಇ ಬ್ಯಾಂಕ್: ಬಿಟಿಜಿ ಪ್ಯಾಕ್ಯುಯಲ್ ಎಂಪ್ರಸಾಸ್