* ಮುಂದಿನ 10 ವರ್ಷಗಳಲ್ಲಿ ನೇಪಾಳದಿಂದ 10 ಸಾವಿರ ಮೆಗಾವಾಟ್ ವಿದ್ಯುತ್ ಆಮದು ಮಾಡಿಕೊಳ್ಳುವ ಕುರಿತು ಭಾರತ ಜನವರಿ 04 ರಂದು ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದ ಹೆಚ್ಚಿನ ಹೂಡಿಕೆ ಸೆಳೆಯಲು ನೇಪಾಳಕ್ಕೆ ನೆರವಾಗಲಿದೆ ಎಂದು ಹೇಳಲಾಗಿದೆ.* ನೇಪಾಳದಲ್ಲಿನ ನದಿಗಳಿಂದಾಗಿ ವಾರ್ಷಿಕ 42 ಸಾವಿರ ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ ತಾಂತ್ರಿಕತೆ ನೆರವು, ಹಣಕಾಸು ಸಂಪನ್ಮೂಲ ಕೊರತೆಯಿಂದಾಗಿ ಪ್ರಸ್ತುತ ವಾರ್ಷಿಕ 3000 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ.* ಪ್ರಸ್ತುತ ನೇಪಾಳದ ಜೊತೆಗೆ ಅಲ್ಪಾವಧಿಯ ವಿದ್ಯುತ್ ಖರೀದಿ ಒಡಂಬಡಿಕೆ ಹೊಂದಿರುವ ಭಾರತ, ನೇಪಾಳದಲ್ಲಿ ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿದೆ. * ಈ ಕುರಿತು ಪ್ರತಿಕ್ರಿಯಿಸಿದ ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಪ್ರೇಮ್ ರೈ ಅವರು, ವಿದ್ಯುತ್ ಖರೀದಿ ಸೇರಿದಂತೆ ಒಟ್ಟು ನಾಲ್ಕು ಒಪ್ಪಂದಗಳನ್ನು ನೇಪಾಳ-ಭಾರತ ಜಂಟಿ ಆಯೋಗದ ಸಭೆಯಲ್ಲಿ ಜನವರಿ 04 ರಂದು ಅಂತಿಮಗೊಳಿಸಲಾಗಿದೆ ಎಂದರು.