* ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ಇನ್ನು ಮುಂದೆ ರಕ್ತಕ್ಕೆ ಸಂಸ್ಕರಣಾ ಶುಲ್ಕವನ್ನು ಮಾತ್ರ ವಿಧಿಸಲು ಅವಕಾಶವಿರಲಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವ ಡಿಸಿಜಿಐ, 'ರಕ್ತವು ಮಾರಾಟಕ್ಕಿಲ್ಲ' ಎಂಬ ಅಭಿಪ್ರಾಯದ ಆಧಾರದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದೆ.* ರಕ್ತಕ್ಕೆ ದುಬಾರಿ ಶುಲ್ಕ ನಿಗದಿ ಮಾಡುವ ಪ್ರವೃತ್ತಿಗೆ ಅಂತ್ಯ ಹೇಳುವ ಉದ್ದೇಶದಿಂದ ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಸಂಸ್ಕರಣಾ ಶುಲ್ಕ ಹೊರತುಪಡಿಸಿ ಇತರ ಎಲ್ಲ ಬಗೆಯ ಶುಲ್ಕಗಳನ್ನು ರದ್ದುಪಡಿಸಿದ್ದಾರೆ.* ಔಷಧಗಳ ಸಮಾಲೋಚನಾ ಸಮಿತಿಯ ಸಭೆಯ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಡಿಸಿಜಿಐ, 'ರಕ್ತವು ಮಾರಾಟಕ್ಕೆ ಅಲ್ಲ' ಅದಕ್ಕೆ ರಕ್ತನಿಧಿಗಳು ಸಂಸ್ಕರಣಾ ಶುಲ್ಕವನ್ನು ಮಾತ್ರ ವಿಧಿಸಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ' ಎಂದು ತಿಳಿಸಿದೆ. * ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ರಕ್ತ ಅಥವಾ ರಕ್ತದ ಘಟಕಗಳಿಗೆ 250 ರಿಂದ 1,550 ರೂ.ಗಳವರೆಗೆ ಸಂಸ್ಕರಣಾ ಶುಲ್ಕವನ್ನ ಮಾತ್ರ ವಿಧಿಸಬಹುದು.* ಖಾಸಗಿ ಆಸ್ಪತ್ರೆಗಳು ಮತ್ತು ರಕ್ತ ಬ್ಯಾಂಕುಗಳು ರಕ್ತದಾನ ಮಾಡದಿದ್ದರೆ ಪ್ರತಿ ಯೂನಿಟ್ಗೆ ಸರಾಸರಿ 2,000 ರಿಂದ 6,000 ರೂ.ಗಳನ್ನ ವಿಧಿಸುತ್ತವೆ. ರಕ್ತದ ಕೊರತೆ ಅಥವಾ ಅಪರೂಪದ ರಕ್ತದ ಗುಂಪು ಇದ್ದರೆ ಶುಲ್ಕವು 10,000 ರೂ.ಗಿಂತ ಹೆಚ್ಚಾಗಿದೆ. ಇದಲ್ಲದೆ, ರಕ್ತದಾನವನ್ನ ಲೆಕ್ಕಿಸದೆ ಸಂಸ್ಕರಣಾ ಶುಲ್ಕವನ್ನ ಯಾವಾಗಲೂ ವಿಧಿಸಲಾಗುತ್ತದೆ.* ಖಾಸಗಿ ಆಸ್ಪತ್ರೆಗಳು ಪ್ರತಿ ಯೂನಿಟ್ ರಕ್ತಕ್ಕೆ (ದಾನಿಗಳು ಇಲ್ಲದಿದ್ದ ಸಂದರ್ಭದಲ್ಲಿ) ₹3000 ಸಾವಿರದಿಂದ ₹8000 ಸಾವಿರದವರೆಗೂ ಶುಲ್ಕ ವಿಧಿಸುತ್ತಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ರಕ್ತದ ಕೊರತೆ ಇದ್ದಾಗ ಅಥವಾ ಅಪರೂಪದ ಗುಂಪಿನ ರಕ್ತ ಬೇಕಿದ್ದಾಗ ಶುಲ್ಕ ಇನ್ನಷ್ಟು ಹೆಚ್ಚಿರುತ್ತದೆ ಎನ್ನಲಾಗಿದೆ.*  ಸಂಪೂರ್ಣ ರಕ್ತ ಅಥವಾ ಪ್ಯಾಕ್ ಮಾಡಿದ ಕೆಂಪು ರಕ್ತ ಕಣಗಳನ್ನ ವಿತರಿಸುವಾಗ, 1,550 ರೂ. ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್ಗೆ ಪ್ರತಿ ಪ್ಯಾಕ್ಗೆ 400 ರೂ. ಕ್ರಾಸ್-ಮ್ಯಾಚಿಂಗ್ ಮತ್ತು ಪ್ರತಿಕಾಯ ಪರೀಕ್ಷೆ ಸೇರಿದಂತೆ ರಕ್ತದ ಮೇಲೆ ಹೆಚ್ಚುವರಿ ಪರೀಕ್ಷೆಗಳನ್ನ ನಡೆಸಲು ಸರ್ಕಾರದ ನಿಯಮಗಳು ಇತರ ಶುಲ್ಕಗಳನ್ನ ನಿಗದಿಪಡಿಸುತ್ತವೆ.