* ವಾಯು ಗುಣಮಟ್ಟ ಸುಧಾರಣೆ ಸೂಚ್ಯಂಕದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಗುಜರಾತ್‌ನ ಸೂರತ್‌, ಮಧ್ಯಪ್ರದೇಶದ ಜಬಲ್‌ಪುರ, ಉತ್ತರ ಪ್ರದೇಶದ ಆಗ್ರಾ ಅನುಕ್ರಮವಾಗಿ ದೇಶದ ಅಗ್ರ ಮೂರು ಸ್ಥಾನ ಪಡೆದಿವೆ.* ರಾಷ್ಟೀಯ ಸ್ವಚ್ಛ ಗಾಳಿ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಬರುವ ದೇಶದ 131 ನಗರಗಳಲ್ಲಿ 95 ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ.* ಜೈಪುರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಕೇಂದ್ರ ಪರಿಸರ ಸಚಿವಾಲಯವು ಸ್ವಚ್ಛ ವಾಯು ಸಮೀಕ್ಷೆ 2024ರ ರಾಷ್ಟ್ರೀಯ ಶುದ್ಧ ಗಾಳಿ ನಗರ ಪ್ರಶಸ್ತಿಗಳನ್ನು ಪ್ರಕಟಿಸಿದೆ.* 21 ನಗರಗಳು ಶೇಕಡಾ 40ರಷ್ಟು ವಾಯು ಗುಣಮಟ್ಟ ಸುಧಾರಣೆ ಕಂಡಿವೆ. 14 ನಗರಗಳು ಶೇಕಡಾ 30ರಿಂದ 40ರಷ್ಟು ವಾಯು ಶುದ್ಧತೆ ದಾಖಲಿಸಿವೆ.* ಮೂರು ಲಕ್ಷದಿಂದ ಹತ್ತು ಲಕ್ಷದವರೆಗೆ ಜನಸಂಖ್ಯೆ ಇರುವ ನಗರಗಳಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್‌, ಮಹಾರಾಷ್ಟ್ರದ ಅಮರಾವತಿ ಮತ್ತು ಉತ್ತರ ಪ್ರದೇಶದ ಝಾನ್ಸಿ ವಾಯು ಗುಣಮಟ್ಟ ಸುಧಾರಣೆ ಹೊಂದಿರುವ ನಗರಗಳು ಎಂದು ಗುರುತಿಸಲ್ಪಟ್ಟಿವೆ.* ಮೂರು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲಿ ಉತ್ತರ ಪ್ರದೇಶದ ರಾಯ್‌ ಬರೇಲಿ, ತೆಲಂಗಾಣದ ನಲ್ಗೊಂಡ ಮತ್ತು ಹಿಮಾಚಲ ಪ್ರದೇಶದ ನಲಗಢ ಅಗ್ರಸ್ಥಾನದಲ್ಲಿವೆ.* ಸ್ವಚ್ಛ ವಾಯು ಸಮೀಕ್ಷೆ 2024ರ ಪ್ರಕಾರ ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಶುದ್ಧ ಗಾಳಿಯಲ್ಲಿ ಅಷ್ಟೇನೂ ಉತ್ತಮವಾಗಿಲ್ಲ.* ಸ್ವಚ್ಛ ವಾಯು ಸರ್ವೇಕ್ಷಣ್‌ ಯೋಜನೆಯಡಿ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ (ಎನ್‌ಸಿಎಪಿ) ನಗರಗಳ ಗಾಳಿಯ ಗುಣಮಟ್ಟವನ್ನು ಆಧರಿಸಿ ಕೇಂದ್ರ ಪರಿಸರ ಸಚಿವಾಲಯ ಪ್ರತಿ ವರ್ಷ ನಗರಗಳಿಗೆ ಶ್ರೇಯಾಂಕವನ್ನು ಪ್ರಕಟಿಸುತ್ತದೆ.* 2019ರಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯನ್ನು (ಎನ್‌ಸಿಎಪಿ) ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಈ ಯೋಜನೆಯಡಿ ವಾಯುಮಾಲಿನ್ಯ ತಡೆಗಟ್ಟುವುದು, ಗಾಳಿ ಗುಣಮಟ್ಟ ಸುಧಾರಿಸುವುದು ಮತ್ತು ಧೂಳಿನ ಪ್ರಮಾಣ ತಗ್ಗಿಸಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.