* ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ 26 ವರ್ಷದ ಅರಿನಾ ಸಬಲೆಂಕಾ ಅವರು ಅಮೆರಿಕಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.* ಫೈನಲ್‌ ನಲ್ಲಿ 6 ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಅವರನ್ನು 7-5, 7-5 ನೇರ ಸೆಟ್‌ಗಳಿಂದ ಸೋಲಿಸಿದ ಅರಿನಾ ಸಬಲೆಂಕಾ ಅವರು ತಮ್ಮ ಚೊಚ್ಚಲ ಯುಎಸ್ ಓಪನ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. * ಸಬಲೆಂಕಾ ಅವರು ಕಳೆದ ವರ್ಷ ಯುಎಸ್ ಓಪನ್ ಫೈನಲ್‌ನಲ್ಲಿ ಕೊಕೊ ಗೌಫ್ ವಿರುದ್ಧ ಮತ್ತು ಎರಡು ವರ್ಷಗಳ ಹಿಂದೆ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದರು.* ಸಬಲೆಂಕಾಗೆ 3.6 ಮಿಲಿಯನ್ (ಸುಮಾರು 30 ಕೋಟಿ 23 ಲಕ್ಷ) ನಗದು ಬಹುಮಾನವನ್ನು ಚಾಂಪಿಯನ್ ಸಬಲೆಂಕಾ ಅವರು ಗೆದ್ದಿದ್ದಾರೆ. ಈ ನಗದು ಬಹುಮಾನ ಕಳೆದ ವರ್ಷಕ್ಕಿಂತ 20 ರಷ್ಟು ಹೆಚ್ಚು. ರನ್ನರ್ ಅಪ್ ಆದ್ದ ಅಮೆರಿಕದ ಪೆಗುಲಾ 1.8 ಮಿಲಿಯನ್ ಡಾಲರ್ (15 ಕೋಟಿ 11 ಲಕ್ಷ ರೂ.) ಪಡೆದುಕೊಂಡಿದ್ದಾರೆ.