* ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತ 'ವಾಜಪೇಯಿ: ದಿ ಆ್ಯಕ್ಸೆಂಟ್ ಆಫ್ ದಿ ಹಿಂದೂ ರೈಟ್' ಕೃತಿಯ ಮೊದಲನೇ ಆವೃತ್ತಿಯು ಮೇ 10ರಂದು ಬಿಡುಗಡೆಯಾಗಲಿದೆ.* ಅಭಿಷೇಕ್ ಚೌಧರಿ ಎಂಬ ಲೇಖಕರು ಈ ಪುಸ್ತಕವನ್ನು ರಚಿಸಿದ್ದು, ಈ ಪುಸ್ತಕವು ವಾಜಪೇಯಿ ಕುರಿತ ಜನಪ್ರಿಯ ಮಿಥ್ಯಗಳು ಮತ್ತು ಅವರ ಕುರಿತು ಯಾರಿಗೂ ತಿಳಿಯದ ಸಂಗತಿಗಳನ್ನು ಹೊಂದಿದೆ ಎನ್ನಲಾಗಿದೆ. ಇದನ್ನು ನ್ಯೂ ಇಂಡಿಯಾ ಫೌಂಡೇಷನ್ ಸಹಕಾರದೊಂದಿಗೆ ಪಿಕಾಡೋ‌ ಇಂಡಿಯಾ ಸಂಸ್ಥೆಯು ಪ್ರಕಟಿಸಿದೆ.* ಪ್ರಕಾಶಕರು ಪ್ರಕಟಣೆಯೊಂದರಲ್ಲಿ 'ಸಂಘ ಪರಿವಾರದ ಜೊತೆ ವಾಜಪೇಯಿ ಅವರು ತಮ್ಮ ಆರಂಭಿಕ ದಿನಗಳಲ್ಲಿ ಹೊಂದಿದ್ದ ಒಡನಾಟದ ಕುರಿತು ಅರ್ಥ ಮಾಡಿಕೊಳ್ಳುವುದು ಭಾರತದ ಬಲಪಂಥದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಕಠಿಣ. 8 ವರ್ಷಗಳು ಗಂಭೀರವಾದ ಅಧ್ಯಯನ ನಡೆಸಲಾಗಿದೆ. ಭಾರತ, ಅಮೆರಿಕ, ಬ್ರಿಟನ್‌ನಲ್ಲಿ ದೊರಕಿದ ಮತ್ತು ಈವರೆಗೂ ಬಹಿರಂಗವಾಗದ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಕಲೆಹಾಕಲಾಗಿದೆ ಮತ್ತು ನೂರಾರು ಜನರ ಸಂದರ್ಶನ ಮಾಡಲಾಗಿದೆ' ಎಂದು ಹೇಳಿದ್ದಾರೆ.