Job Description: * ತ್ಯಾಜ್ಯ ಹಾಗೂ ಗೊಬ್ಬರ ತುಂಬಿದ ಬಲೂನ್ ಗಳನ್ನು ಹಾರಿಬಿಡುತ್ತಿರುವ ಉತ್ತರ ಕೊರಿಯಾಕ್ಕೆ ತಕ್ಕ ಪಾಠ ಕಲಿಸಲು ದಕ್ಷಿಣ ಕೊರಿಯಾ ದೇಶವು ಉತ್ತರ ಕೊರಿಯಾ ಜೊತೆಗಿನ ಶಾಂತಿ ಮತ್ತು ಹೊಂದಾಣಿಕೆ ಒಪ್ಪಂದವನ್ನು ರದ್ದುಪಡಿಸುವುದಾಗಿ ಘೋಷಿಸಿದೆ. * ದಕ್ಷಿಣ ಕೊರಿಯಾದ ನಾಗರಿಕರೊಬ್ಬರು ಕರಪತ್ರ ಹಂಚಿಕೆ ಅಭಿಯಾನಕ್ಕೆ ಪ್ರತೀಕಾರವಾಗಿ ಹಲವು ದಿನಗಳ ಕಾಲ ಉತ್ತರ ಕೊರಿಯಾವು ನೂರಾರು ಕಸ ಮತ್ತು ಗೊಬ್ಬರ ತುಂಬಿದ ಬಲೂನ್‌ಗಳನ್ನು ದಕ್ಷಿಣ ಕೊರಿಯಾದತ್ತ ಹಾರಿಬಿಟ್ಟಿತ್ತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದಕ್ಷಿಣ ಕೊರಿಯಾ, ಉತ್ತರ ಕೊರಿಯಾದ ವಿರುದ್ಧ ಸಹಿಸಲಾಗದ ಪ್ರತೀಕಾರದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.