* ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಗೌತಮ್ ಅದಾನಿ ಅವರು ಹಿಂದಿಕ್ಕುವ ಮೂಲಕ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರುಪಡೆದಿದ್ದಾರೆ. * ಬ್ಲೂಮ್ ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ ಏಷ್ಯಾದ ಶ್ರೀಮಂತರ ವರದಿಯಲ್ಲಿ ಗೌತಮ್ ಅದಾನಿ ಮೊದಲ ಸ್ಥಾನಕ್ಕೇರಿದ್ದರೆ, ಮುಕೇಶ್ ಅಂಬಾನಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. * ಗೌತಮ ಅದಾನಿ ಅವರ ಒಟ್ಟು 111 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿರುವ ಅದಾನಿ ಈಗ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿದ್ದಾರೆ, ಹಾಗೂ ಅಂಬಾನಿ ಒಟ್ಟು ಆಸ್ತಿ 109 ಬಿಲಿಯನ್ ಅಮೆರಿಕನ್ ಡಾಲರ್ ಹೊಂದಿರುವ ಅಂಬಾನಿ ಅವರು 12ರ ಸ್ಥಾನದಲ್ಲಿದ್ದಾರೆ ಎಂದು ಬ್ಲೂಮ್‌ಬರ್ಗ್ ಇಂಡೆಕ್ಸ್ ವರದಿ ತಿಳಿಸಿದೆ. * 2023ರಲ್ಲಿ ಸುಪ್ರೀಂ ಕೋರ್ಟ್ ಹಿಂಡನ್‌ಬರ್ಗ್ ವರದಿ ಕುರಿತು ತನಿಖೆಗೆ ಆದೇಶಿಸಿತ್ತು. ಹಿಂಡನ್‌ಬರ್ಗ್ ವರದಿಗೂ ಮುನ್ನ ಅದಾನಿ ವಿಶ್ವದ 3ನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. * ಮಾರುಕಟ್ಟೆ ಮೌಲ್ಯದಲ್ಲಿ 84,064 ಕೋಟಿ ರೂಪಾಯಿಗಳ ಸೇರ್ಪಡೆಯು ಮೇ 31 ರಂದು (ಶುಕ್ರವಾರ) ಷೇರು ವಹಿವಾಟಿನ ಮುಕ್ತಾಯಕ್ಕೆ 10 ಅದಾನಿ ಸಮೂಹದ ಪಟ್ಟಿಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳವನ್ನು 17.51 ಲಕ್ಷ ಕೋಟಿ ರೂಪಾಯಿಗಳಲ್ಲಿ ವಹಿವಾಟು ನಡೆಸಿದವು.