* ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭಾ ಚುನಾವಣೆಗಳ ಜೊತೆಗೆ 18ನೇ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜೂನ್ 04 ರಂದು (ಮಂಗಳವಾರ) ನಡೆಯಿತು. ಸಂಸತ್ತಿನ ಕೆಳಮನೆ ಎಂದೂ ಕರೆಯಲ್ಪಡುವ ಲೋಕಸಭೆಯು 543 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. * ಪ್ರಜಾಪ್ರಭುತ್ವದ ಅತಿದೊಡ್ಡ ವಿಶ್ವದಾಖಲೆಯ 64.2 ಕೋಟಿ ಮತದಾರರು ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದರು.* ಬಿಜೆಪಿ 239 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, 109 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಪ್ರತಿಪಕ್ಷ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದು, 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ನೇತೃತ್ವದ 'ಇಂಡಿಯಾ'ದ ಸಮಾಜವಾದಿ ಪಕ್ಷ 38, ತೃಣಮೂಲ ಕಾಂಗ್ರೆಸ್ 29, ಡಿಎಂಕೆ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.* 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ಲೋಕಸಭೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಿಗಿಂತ ಅತ್ಯಧಿಕ ಸದಸ್ಯರನ್ನು ಹೊಂದಿದೆ. ಮಹಾರಾಷ್ಟ್ರವು ಒಟ್ಟು 48 ಕ್ಷೇತ್ರಗಳೊಂದಿಗೆ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿದೆ. * 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ, ಬಿಜೆಪಿ ಪರ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದರು. ಇದರ ಪರಿಣಾಮ ಎನ್ಡಿಎ ಮೈತ್ರಿಕೂಟ 'ಮ್ಯಾಜಿಕ್ ನಂಬರ್' 272ರ ಗಡಿಯನ್ನೂ ಮೀರಿ 354 ಸ್ಥಾನಗಳನ್ನು ಗೆದ್ದು ಭರ್ಜರಿ ಜಯಭೇರಿ ಬಾರಿಸಿತ್ತು. * 2019ರಲ್ಲೂ ನರೇಂದ್ರ ಮೋದಿ ಅವರು ಬಿಜೆಪಿ ಏಕಾಂಗಿಯಾಗಿಯೇ 303 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲೂ ಗೆಲುವಿನ ಅತ್ಯುತ್ಸಾಹದಲ್ಲೇ ಪ್ರಧಾನಿ ನರೇಂದ್ರ ಮೋದಿ 400ರ ಗಡಿದಾಟುವ ಮಹಾಘೋಷಣೆ ಮೊಳಗಿಸಿದ್ದರು. * ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ ರಾಜ್ಯಗಳು ಮಧ್ಯಪ್ರದೇಶ, ದೆಹಲಿ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಯಾರುಮಾಚಲ ಪ್ರದೇಶ ಮತ್ತು ತ್ರಿಪುರಾ.* ಲೋಕಸಭಾ ಚುನಾವಣೆಯಲ್ಲಿ ಗೆದ್ದವರು : - ಪ್ರಧಾನಿ ನರೇಂದ್ರ ಮೋದಿ (ವಾರಾಣಸಿ)- ಅಮಿತ್ ಷಾ (ಗಾಂಧಿನಗರ)- ರಾಹುಲ್ ಗಾಂಧಿ (ವಯನಾಡು, ರಾಯಬರೇಲಿ)- ಶಶಿ ತರೂರ್ (ತಿರುವನಂತಪುರ)- ನಿತಿನ್ ಗಡ್ಕರಿ (ನಾಗಪುರ)- ರಾಜನಾಥ ಸಿಂಗ್ (ಲಖನೌ)- ಅಖಿಲೇಶ್ ಯಾದವ್ (ಕನೌಜ್)- ಕಂಗನಾ ರಣಾವತ್ (ಮಂಡಿ)* ಲೋಕಸಭಾ ಚುನಾವಣೆಯಲ್ಲಿ ಸೋತವರು : - ಸ್ಮೃತಿ ಇರಾನಿ (ಅಮೇಠಿ)- ಪ್ರಜ್ವಲ್ ರೇವಣ್ಣ (ಹಾಸನ)- ರಾಜೀವ ಚಂದ್ರಶೇಖರ (ತಿರುವನಂತಪುರ)- ಓಮರ್ ಅಬ್ದುಲ್ಲಾ (ಬಾರಾಮುಲ್ಲಾ)- ಮಾಧವಿ ಲತಾ (ಹೈದರಾಬಾದ್)