➤ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಫೆಬ್ರವರಿ 11, 2026 ರಂದು ವಿಧಾನಸಭೆಯಲ್ಲಿ ರಾಜ್ಯದ ಅತಿದೊಡ್ಡ ಬಜೆಟ್ ಅನ್ನು ಮಂಡಿಸಿದರು. ₹9,12,696.35 ಕೋಟಿ (ಸುಮಾರು ₹9.13 ಲಕ್ಷ ಕೋಟಿ) ಮೊತ್ತದ ಈ ಬಜೆಟ್, ಉತ್ತರ ಪ್ರದೇಶವನ್ನು $1 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಮಂಡಿಸಿದ ಈ ಬಜೆಟ್ ಕಳೆದ ವರ್ಷಕ್ಕಿಂತ 12.2% ರಷ್ಟು ದೊಡ್ಡದಾಗಿದೆ.➤ 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿತ್ತೀಯ ಕೊರತೆಯನ್ನು 2030-31ರವರೆಗೆ ಶೇಕಡಾ 3ಕ್ಕೆ ಸೀಮಿತಗೊಳಿಸುವ ಮೂಲಕ ಆರ್ಥಿಕ ಶಿಸ್ತಿಗೆ ಒತ್ತು ನೀಡಲಾಗಿದ್ದು, ಒಟ್ಟು ಬಜೆಟ್ ಮೊತ್ತದ ಶೇಕಡಾ 19.5 ರಷ್ಟನ್ನು ಅಭಿವೃದ್ಧಿ ಕೆಲಸಗಳಿಗಾಗಿ ಅಂದರೆ ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ ಮತ್ತು ರಾಜ್ಯದ ತಲಾ ಆದಾಯವು 2025-26ರಲ್ಲಿ ₹1,20,000ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ.➤ ಸರ್ಕಾರವು ಶಿಕ್ಷಣ ಮತ್ತು ಕೃಷಿಗೆ ಅತಿ ಹೆಚ್ಚಿನ ಆದ್ಯತೆ ನೀಡಿದೆ: ಶಿಕ್ಷಣ - 12.4% - ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್‌ಗಳ ನಿರ್ಮಾಣ.ಕೃಷಿ - 9% - UP-AGREES ಯೋಜನೆಯಡಿ ಕೃಷಿ ರಫ್ತು ಹಬ್ ಸ್ಥಾಪನೆ.ಆರೋಗ್ಯ - 6% - ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಮತ್ತು ಟ್ರಾಮಾ ಸೆಂಟರ್ ಸ್ಥಾಪನೆ.➤ ರೈತರಿಗಾಗಿ ಹೊಸ ಯೋಜನೆ: UP-AGREES: ವಿಶ್ವಬ್ಯಾಂಕ್ ನೆರವಿನೊಂದಿಗೆ ಘೋಷಿಸಲಾಗಿರುವ 'UP-AGREES' ಯೋಜನೆಯಡಿ ಕೃಷಿ ರಫ್ತು ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ರೈತರಿಗೆ ಜಾಗತಿಕ ಮಾರುಕಟ್ಟೆಯ ಸಂಪರ್ಕ ಕಲ್ಪಿಸಿ ಅವರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.➤ ಯುವಜನರಿಗೆ ಉದ್ಯೋಗ ನೀಡಲು "ಮಿಷನ್ ಮೋಡ್" ಕೌಶಲ್ಯ ತರಬೇತಿಯನ್ನು ಘೋಷಿಸಿರುವ ಈ ಬಜೆಟ್‌ನಲ್ಲಿ 10 ಲಕ್ಷ ಉದ್ಯೋಗಾವಕಾಶಗಳ ಸೃಜನೆಯ ಗುರಿ ಹೊಂದಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವ ಜೊತೆಗೆ ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ವಿತರಿಸುವ ಮೂಲಕ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಲಾಗಿದೆ.➤ ಮೂಲಸೌಕರ್ಯ ಮತ್ತು ಸಂಪರ್ಕ ವಲಯಕ್ಕೆ ಉತ್ತೇಜನ ನೀಡಲು ದೆಹಲಿ-ವಾರಣಾಸಿ ಹಾಗೂ ವಾರಣಾಸಿ-ಸಿಲಿಗುರಿ ನಡುವೆ ಹೈ-ಸ್ಪೀಡ್ ರೈಲು ಸಂಪರ್ಕ ಕಲ್ಪಿಸಲಾಗುತ್ತಿದ್ದು, ಸಾರನಾಥ ಮತ್ತು ಹಸ್ತಿನಾಪುರಗಳನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರದೊಂದಿಗೆ ಸಹಯೋಗ ಹೊಂದುವ ಜೊತೆಗೆ ಗಂಗಾ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಯೋಜನೆಗಳಿಗೆ ಹೆಚ್ಚಿನ ಧನಸಹಾಯವನ್ನು ಒದಗಿಸಲಾಗಿದೆ.➤ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣ:- ಮುಖ್ಯಮಂತ್ರಿ ಸಮೂಹ ವಿವಾಹ ಯೋಜನೆ: ಕನ್ಯಾದಾನ ಸಹಾಯಧನವನ್ನು ₹51,000 ದಿಂದ ₹1.01 ಲಕ್ಷಕ್ಕೆ ಏರಿಕೆ.- ಮಹಿಳಾ ಬೀಟ್ ಆಫೀಸರ್: 'ಮಿಷನ್ ಶಕ್ತಿ' ಅಡಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ವಾಹನಗಳ ಖರೀದಿಗೆ ₹25 ಕೋಟಿ ಮೀಸಲು.