➤ ಪ್ರತಿ ವರ್ಷ ಫೆಬ್ರವರಿ 13ರಂದು ರೇಡಿಯೊ ಮಹತ್ವದ ಬಗ್ಗೆ ಜನ ಜಾಗೃತಿ ಮೂಡಿಸಲು ಮತ್ತು ರೇಡಿಯೊ ಮೂಲಕ ಮಾಹಿತಿ- ಪ್ರಸಾರವನ್ನು ಉತ್ತೇಜಿಸಲು ವಿಶ್ವ ರೇಡಿಯೋ ದಿನ ಆಚರಿಸಲಾಗುತ್ತದೆ.
➤ ಪ್ರತಿ ವರ್ಷ ಯುನೆಸ್ಕೋ (UNESCO) ಒಂದು ನಿರ್ದಿಷ್ಟ ವಿಷಯದೊಂದಿಗೆ ಈ ದಿನವನ್ನು ಆಚರಿಸುತ್ತದೆ. 2026ರ ವಿಶ್ವ ರೇಡಿಯೋ ದಿನದ ಥೀಮ್ (Theme) : "ರೇಡಿಯೋ ಮತ್ತು ಕೃತಕ ಬುದ್ಧಿಮತ್ತೆ: ಎಐ ಒಂದು ಸಾಧನವೇ ಹೊರತು ಧ್ವನಿಯಲ್ಲ(Radio and Artificial Intelligence: AI is a tool, not a voice)" ಎಂಬುವುದಾಗಿದೆ. ಈ ವರ್ಷದ ಥೀಮ್ ರೇಡಿಯೋ ಕ್ಷೇತ್ರದಲ್ಲಿ ಎಐ (Artificial Intelligence) ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತಲೇ, ಮಾನವ ಸಂವೇದನೆ ಮತ್ತು ವಿಶ್ವಾಸಾರ್ಹತೆ ರೇಡಿಯೋದ ಜೀವಾಳ ಎಂಬ ಸಂದೇಶವನ್ನು ನೀಡುತ್ತದೆ.
➤ ಫೆಬ್ರವರಿ 13 ರಂದು 1946 ರಲ್ಲಿ ಅಮೆರಿಕದಲ್ಲಿ ಮೊದಲ ರೇಡಿಯೋ ಪ್ರಸರಣ ಸಂದೇಶವನ್ನು ಕಳುಹಿಸಲಾಯಿತು. 2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ಅದೇ ದಿನದಂದು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬಗ್ಗೆ ತನ್ನ ಅಭಿಪ್ರಾಯವನ್ನು ಯುನೆಸ್ಕೋದ ಮುಂದೆ ಪ್ರಸ್ತಾಪಿಸಲಾಯಿತು.
➤ 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರೇಡಿಯೋ ದಿನವು ಆಚರಿಸಲು ಮುಂದಾಯಿತು. ಹಾಗಾಗಿ 2012ರ ಫೆಬ್ರವರಿ 13ರಿಂದ ಪ್ರತಿ ವರ್ಷವು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
➤ ಭಾರತದಲ್ಲಿ ರೇಡಿಯೋ ಪ್ರಸಾರವು ಆಕಾಶವಾಣಿ ಅಸ್ತಿತ್ವಕ್ಕೆ ಬರುವ ಸರಿಸುಮಾರು 13 ವರ್ಷಗಳ ಮೊದಲೇ ಪ್ರಾರಂಭವಾಯಿತು. ಬಾಂಬೆಯ ರೇಡಿಯೋ ಕ್ಲಬ್ ಜೂನ್ 1923 ರಲ್ಲಿ ಭಾರತದಲ್ಲಿ ಮೊದಲ ರೇಡಿಯೋ ಪ್ರಸಾರವನ್ನು ಮಾಡಿತು. ಸರ್ ಜಗದೀಶ್ ಚಂದ್ರ ಬೋಸ್ (1858-1937) ಭಾರತದ ರೇಡಿಯೋ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ
➤ ಇಟಲಿಯ ಪ್ರಸಿದ್ಧ ವಿಜ್ಞಾನಿ ಗುಗ್ಲಿ ಎಲ್ಮೊ ಮಾರ್ಕೋನಿ (Guglielmo Marconi) ಅವರು ರೇಡಿಯೋವನ್ನು ಕಂಡುಹಿಡಿದರು.
➤ ಭಾರತದಲ್ಲಿ ರೇಡಿಯೋ ಕೇವಲ ಮನರಂಜನೆಯ ಸಾಧನವಾಗಿರದೆ, ಕ್ರಾಂತಿಕಾರಿ ಬದಲಾವಣೆಗಳ ಮುನ್ಸೂಚಕವಾಗಿ ಬೆಳೆದು ಬಂದಿದೆ.
=> 1927 - ಮುಂಬೈನಲ್ಲಿ ಖಾಸಗಿಯಾಗಿ ರೇಡಿಯೋ ಪ್ರಸಾರ ಆರಂಭವಾಯಿತು.
=> 1936 - 'ಇಂಡಿಯನ್ ಸ್ಟೇಟ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್' (ISBS) ಆರಂಭ. ಜೂನ್ 8 ರಂದು ಇದು 'ಆಲ್ ಇಂಡಿಯಾ ರೇಡಿಯೋ' (AIR) ಆಗಿ ಬದಲಾಯಿತು.
=> 1956 - ಅಧಿಕೃತವಾಗಿ 'ಆಕಾಶವಾಣಿ' ಎಂದು ನಾಮಕರಣ ಮಾಡಲಾಯಿತು.
=> 1957 - ಅಕ್ಟೋಬರ್ 3ರಂದು ಜನಪ್ರಿಯ 'ವಿವಿಧ ಭಾರತಿ' ಸೇವೆ ಆರಂಭವಾಯಿತು.
=> 1977 - ಜುಲೈ 23ರಂದು ಚೆನ್ನೈನಲ್ಲಿ ಭಾರತದ ಮೊದಲ FM ಪ್ರಸಾರ ಆರಂಭವಾಯಿತು.
ಆಕಾಶವಾಣಿಯ ಧೈಯವಾಕ್ಯ "ಬಹುಜನ ಹಿತಾಯ ಬಹುಜನ ಸುಖಾಯ".
➤ ಭಾರತದಲ್ಲಿ ಸಮುದಾಯ ರೇಡಿಯೋ ಕ್ರಾಂತಿಯು 2002ರಲ್ಲಿ ಆರಂಭವಾಯಿತು. 2004 ಫೆಬ್ರವರಿ 1ರಂದು ಎಲ್.ಕೆ. ಅಡ್ವಾಣಿಯವರು ಮೊದಲ ಕೇಂದ್ರವನ್ನು ಉದ್ಘಾಟಿಸಿದರು. ಪ್ರಸ್ತುತ ಭಾರತದಲ್ಲಿ 528ಕ್ಕೂ ಹೆಚ್ಚು ಸಮುದಾಯ ರೇಡಿಯೋ ಕೇಂದ್ರಗಳು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಕೆಲಸ ಮಾಡುತ್ತಿವೆ.
➤ 'ರೇಡಿಯೋ ಮ್ಯಾನ್ ಆಫ್ ಇಂಡಿಯಾ': 2025-26ರಲ್ಲಿ ರೇಡಿಯೋ ಕ್ಷೇತ್ರದಲ್ಲಿ ಸುದ್ದಿಯಾದ ಹೆಸರು ಉತ್ತರ ಪ್ರದೇಶದ ರಾಮ್ ಸಿಂಗ್ ಬೌದ್ಧ್. ಇವರು ತಮ್ಮ ಬಳಿ ಇರುವ 1,257 ಕ್ಕೂ ಹೆಚ್ಚು ಅಪರೂಪದ ರೇಡಿಯೋಗಳ ಸಂಗ್ರಹಕ್ಕಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾರೆ. ಇವರ ಈ ಸಾಧನೆಯನ್ನು ಪ್ರಧಾನಿ ಮೋದಿ ಅವರು ಕೂಡ ಶ್ಲಾಘಿಸಿದ್ದಾರೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.