* ಉಕ್ರೇನ್‌ ಪ್ರಾದೇಶಿಕ ಸಮಗ್ರತೆ ಕಾಪಾಡುವಂತೆ ಎರಡು ವರ್ಷಗಳಿಂದ ನಡೆಸುತ್ತಿರುವ  'ಯುದ್ಧ ಕೊನೆಗೊಳಿಸುವ ಯಾವುದೇ ಒಪ್ಪಂದವಿರಬೇಕು ಎಂದು ಸುಮಾರು 80 ದೇಶಗಳು ಜೂನ್ 16 ರಂದು (ಭಾನುವಾರ) ಕರೆ ನೀಡಿವೆ. * ಬರ್ಗೆನ್ ಸ್ಟಾಕ್ ರೆಸಾರ್ಟ್‌ನಲ್ಲಿ ನಡೆದ ಎರಡು ದಿನಗಳ ಸ್ವಿಸ್ ಶಾಂತಿ ಸಮ್ಮೇಳನದಲ್ಲಿ ಈ ಒಮ್ಮತದ ಕರೆ ನೀಡಲಾಗಿದೆ.* ರಷ್ಯಾ ಅನುಪಸ್ಥಿತಿಯಲ್ಲಿ ಈ ಕರೆ ಕೊಡುವಲ್ಲಿ ಪ್ರಮುಖ ಅಭಿವೃದ್ಧಿಶೀಲ ದೇಶಗಳಾದ ಭಾರತ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಸಂಯುಕ್ತ ಅರಬ್ ಸಂಸ್ಥಾನ ಸಹಿ ಹಾಕದೇ ಹೊರಗುಳಿದಿವೆ.* ಈ ಶಾಂತಿ ಸಮ್ಮೇಳನಕ್ಕೆ ರಷ್ಯಾಕ್ಕೆ ಆಹ್ವಾನ ನೀಡಲಾಗಿರಲಿಲ್ಲ. ಆದರೆ ಇದರಲ್ಲಿ ಪಾಲ್ಗೊಂಡಿದ್ದ ಬಹುತೇಕ ದೇಶಗಳ ನಾಯಕರು ರಷ್ಯಾ ಶಾಂತಿ ಒಪ್ಪಂದಕ್ಕೆ ಒಪ್ಪಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.* ಶಾಂತಿ ಸಮ್ಮೇಳನದಲ್ಲಿ ಪರಮಾಣು ಸುರಕ್ಷತೆ, ಆಹಾರ ಭದ್ರತೆ ಮತ್ತು ಖೈದಿಗಳ ವಿನಿಮಯ ಕುರಿತ ಚರ್ಚೆಯಾದವು. 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸ್ವಿಟ್ಟರ್ಲೆಂಡ್ ಅಧ್ಯಕ್ಷೆ ವಿಯೋಲಾ ಪ್ಯಾಟ್ರಿಸಿಯಾ ಅಮೈರ್ಡ್ ಅವರು ಆತಿಥ್ಯ ವಹಿಸಿದ್ದರು.