* ಅನುಭವಿ ರಾಜತಾಂತ್ರಿಕ ಮುಕ್ತೇಶ್ ಕುಮಾರ್ ಪರದೇಶಿ ಅವರನ್ನು ಟರ್ಕಿಗೆ ಭಾರತದ ಹೊಸ ರಾಯಭಾರಿಯಾಗಿ ನೇಮಿಸಲಾಗಿದೆ.* 1991ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ ಮುಕ್ತೇಶ್, ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.* ಮುಕ್ತೇಶ್ ಅವರು ಜುಲೈ 2019ರಿಂದ 2022ರ ವರೆಗೆ ನ್ಯೂಜಿಲ್ಯಾಂಡ್‌ಗೆ ಭಾರತದ ಹೈಕಮಿಷನರ್‌ ಆಗಿದ್ದರು. ಅದರೊಂದಿಗೆ ಅವರು ಸಮೋವಾ, ವನವಾಟು, ನಿಯು ಮತ್ತು ಕುಕ್ ದ್ವೀಪಗಳಿಗೂ ಏಕಕಾಲದಲ್ಲಿ ಹೈ ಕಮಿಷನರ್ ಆಗಿದ್ದರು. 2016ರಿಂದ 2019ರವರೆಗೆ ಮೆಕ್ಸಿಕೋಗೂ ಭಾರತದ ರಾಯಭಾರಿಯಾಗಿದ್ದರು.* ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ಯಶಸ್ವಿಯಾಗಿ ಆಯೋಜಿಸಿದ್ದ G20 ಶೃಂಗಸಭೆಯ ಯಶಸ್ವಿ ಹಾಗೂ ಉಕ್ರೇನ್ ಸಂಘರ್ಷದ ಬಗ್ಗೆ ಭಿನ್ನಾಭಿಪ್ರಾಯ ನಿವಾರಿಸುವ ಮೂಲಕ ನಾಯಕರ ಘೋಷಣೆ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಉನ್ನತ ಅಧಿಕಾರಿಗಳ ಗುಂಪಿನಲ್ಲಿ ಪರದೇಶಿ ಅವರು ಪ್ರಮುಖರಾಗಿದ್ದರು.* ವಿರಂದರ್ ಪಾಲ್ ಅವರ ನಿಧನದ ನಂತರ ಟರ್ಕಿಯ ಭಾರತದ ರಾಯಭಾರಿ ಹುದ್ದೆಯು ಜೂನ್‌ನಿಂದ ತೆರವಾಗಿದೆ.