* ಭಾರತೀಯ ವಾಯುಸೇನೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. * ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು ವಾಯುಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.* ಹಾಲಿ ಮುಖ್ಯಸ್ಥರಾದ ಏರ್‌ ಚೀಫ್‌ ಮಾರ್ಷಲ್‌ ವಿವೇಕ್ ರಾಮ್ ಚೌಧರಿ ಅವರು ಇದೇ ಸೆ. 30ರಂದು ನಿವೃತ್ತರಾಗಲಿದ್ದು, ಅವರಿಂದ ಅಮರ್ ಪ್ರೀತ್ ಸಿಂಗ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಾಯುಸೇನೆಯಲ್ಲಿ ಅಮರ್ ಪ್ರೀತ್ ಸಿಂಗ್ ಅವರು ಸುಮಾರು 40 ವರ್ಷಗಳ ಕಾಲ ಸುದೀರ್ಘ ಮತ್ತು ವಿಶಿಷ್ಟ ಸೇವೆಯನ್ನು ನೀಡಿದ್ದಾರೆ. * ಅಮರ್ ಪ್ರೀತ್ ಸಿಂಗ್ ಅವರ ವೃತ್ತಿಜೀವನದ ಅವಧಿಯಲ್ಲಿ ಅಧಿಕಾರಿಯು ಕಾರ್ಯಾಚರಣೆಯ ಫೈಟರ್ ಸ್ಕ್ವಾಡ್ರನ್ ಮತ್ತು ಮುಂಚೂಣಿಯ ವಾಯುನೆಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಪರೀಕ್ಷಾ ಪೈಲಟ್ ಆಗಿ ಅವರು ರಷ್ಯಾದ ಮಾಸ್ಕೋದಲ್ಲಿ MiG-29 ಅಪ್‌ಗ್ರೇಡ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ತಂಡವನ್ನು ಮುನ್ನಡೆಸಿದ್ದರು. * ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ (ಫ್ಲೈಟ್ ಟೆಸ್ಟ್) ಆಗಿಯೂ ಸೇವೆ ಸಲ್ಲಿಸಿದ್ದರು ಮತ್ತು ಲಘು ಯುದ್ಧ ವಿಮಾನ ತೇಜಸ್‌ನ ಹಾರಾಟ ಪರೀಕ್ಷೆಯ ಜವಾಬ್ದಾರಿಯನ್ನು ವಹಿಸಿದ್ದರು.* ಅಮರ್ ಪ್ರೀತ್ ಅವರು ಸೌತ್ ವೆಸ್ಟರ್ನ್ ಏರ್ ಕಮಾಂಡ್‌ನಲ್ಲಿ ಏರ್ ಡಿಫೆನ್ಸ್ ಕಮಾಂಡರ್ ಮತ್ತು ಈಸ್ಟರ್ನ್ ಏರ್ ಕಮಾಂಡ್‌ನಲ್ಲಿ ಹಿರಿಯ ಏರ್ ಸ್ಟಾಫ್ ಆಫೀಸರ್ ಆಗಿ ಪ್ರಮುಖ ಸಿಬ್ಬಂದಿ ನೇಮಕಾತಿಗಳನ್ನು ಹೊಂದಿದ್ದಾರೆ. ಅಂತೆಯೇ ವೈಸ್ ಚೀಫ್ ಆಫ್ ಏರ್ ಸ್ಟಾಫ್ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು, ಅವರು ಸೆಂಟ್ರಲ್ ಏರ್ ಕಮಾಂಡ್ ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದರು ಎಂದು ತಿಳಿದುಬಂದಿದೆ.▪️ ಭೂಸೇನೆ ಮುಖ್ಯಸ್ಥರು :- ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ▪️ ವಾಯು ಸೇನೆ ಮುಖ್ಯಸ್ಥರು :- ಏರ್‌ ಚೀಫ್‌ ಮಾರ್ಷಲ್‌ ವಿವೇಕ್ ರಾಮ್ ಚೌಧರಿ ಅವರು  ಸೆಪ್ಟೆಂಬರ್. 30 ರಿಂದ ಅಮರ್ ಪ್ರೀತ್ ಸಿಂಗ್ ಅವರು ನೇಮಕವಾಗಲಿದ್ದಾರೆ. ▪️ ನೌಕಾಪಡೆಯ ಮುಖ್ಯಸ್ಥರು :- ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ