* ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟ ಮಾಡಿರುವ ನೂತನ ಟಿ20 ಶ್ರೇಯಾಂಕ ಪಟ್ಟಿಯನ್ನು (ICC T20I Rankings) ಪ್ರಕಟಿಸಿದೆ. * ಟಿ20 ವಿಶ್ವಕಪ್ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್ನಲ್ಲಿ ಮಿಂಚುವ ಮೂಲಕ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದ ಹಾರ್ದಿಕ್‌ ಪಾಂಡ್ಯ ಅವರು ಆಲ್ರೌಂಡರ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.* ಈ ಬಾರಿ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನ ಅಲಂಕರಿಸಿದರೆ, ಬೌಲರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ನ ಆದಿಲ್ ರಶೀದ್ ಮೊದಲ ಸ್ಥಾನದಲ್ಲಿದ್ದಾರೆ. * ಶ್ರೀಲಂಕಾ ಟಿ20-ಐ ತಂಡದ ನಾಯಕ ವಾನಿಂದು ಹಸರಂಗ ಜೊತೆಗೆ ನಂ.1 ಆಲ್‌ರೌಂಡರ್‌ ಸ್ಥಾನವನ್ನು ಹಾರ್ದಿಕ್‌ ಹಂಚಿಕೊಂಡಿದ್ದಾರೆ. * ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 17ನೇ ಓವರ್ ಬೌಲ್ ಮಾಡಿದ್ದ ಹಾರ್ದಿಕ್, 27 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿದ್ದ ಸ್ಫೋಟಕ ಬ್ಯಾಟ್ಸಮನ್ ಹೆನ್ರಿಕ್ ಕ್ಲಾಸೆನ್ ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೇ ಬಸಲಿಸಿದ್ದರು.* ಫೈನಲ್ ಪಂದ್ಯದ ನಿರ್ಣಾಯಕ ಹಂತದಲ್ಲಿ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ವಿಕೆಟ್‌ಗಳನ್ನು ಗಳಿಸಿದ್ದ ಹಾರ್ದಿಕ್ ಪಂದ್ಯದ ಜಯಕ್ಕೆ ಕಾರಣರಾಗಿದ್ದರು.* ಭಾರತದ ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಏಳು ಸ್ಥಾನಗಳ ಬಡ್ತಿಯೊಂದಿಗೆ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ.* ಬೌಲಿಂಗ್ ವಿಭಾಗದಲ್ಲಿ ಜಸಪ್ರೀತ್ ಬೂಮ್ರಾ ಅವರು 12ನೇ ಸ್ಥಾನಕ್ಕೆ ಏರಿದ್ದಾರೆ. ಅವರು 2020ರ ನಂತರ ಮಾಡಿದ ಉತ್ತಮ ಸಾಧನೆ ಇದಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು 15 ವಿಕೆಟ್‌ಗಳನ್ನು ಗಳಿಸಿದ್ದರು.* ಟಿ20 ಬ್ಯಾಟರ್ಗಳ ಟಾಪ್-10 ಪಟ್ಟಿ:ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 844 ರೇಟಿಂಗ್ಸೂರ್ಯಕುಮಾರ್ ಯಾದವ್ (ಭಾರತ)- 838 ರೇಟಿಂಗ್ಫಿಲ್ ಸಾಲ್ಟ್ (ಇಂಗ್ಲೆಂಡ್)- 797 ರೇಟಿಂಗ್ಬಾಬರ್ ಆಝಂ (ಪಾಕಿಸ್ತಾನ್)- 755 ರೇಟಿಂಗ್ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)- 746 ರೇಟಿಂಗ್ಜೋಸ್ ಬಟ್ಲರ್ (ಇಂಗ್ಲೆಂಡ್)- 746 ರೇಟಿಂಗ್ಯಶಸ್ಸಿ ಜೈಸ್ವಾಲ್ (ಭಾರತ)- 659 ರೇಟಿಂಗ್ಬ್ರಾಂಡನ್ ಕಿಂಗ್ (ವೆಸ್ಟ್ ಇಂಡೀಸ್)- 656 ರೇಟಿಂಗ್ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್)- 655 ರೇಟಿಂಗ್ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 646 ರೇಟಿಂಗ್* ಟಿ20 ಬೌಲರ್ಗಳ ಟಾಪ್-10 ಪಟ್ಟಿ:ಆದಿಲ್ ರಶೀದ್ (ಇಂಗ್ಲೆಂಡ್)- 718 ರೇಟಿಂಗ್ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ)- 675 ರೇಟಿಂಗ್ವನಿಂದು ಹಸರಂಗ (ಶ್ರೀಲಂಕಾ)- 674 ರೇಟಿಂಗ್ರಶೀದ್ ಖಾನ್ (ಅಫ್ಘಾನಿಸ್ತಾನ್)- 668 ರೇಟಿಂಗ್ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 662 ರೇಟಿಂಗ್ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್)- 659 ರೇಟಿಂಗ್ಅಕ್ಷರ್ ಪಟೇಲ್ (ಭಾರತ)- 657 ರೇಟಿಂಗ್ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 654 ರೇಟಿಂಗ್ಕುಲ್ದೀಪ್ ಯಾದವ್ (ಭಾರತ)- 654 ರೇಟಿಂಗ್ಫಝಲ್ಹಕ್ ಫಾರೂಖಿ (ಅಫ್ಘಾನಿಸ್ತಾನ್)- 645 ರೇಟಿಂಗ್* ಟಿ20 ಆಲ್ರೌಂಡರ್ಗಳ ಟಾಪ್-10 ಪಟ್ಟಿ:ಹಾರ್ದಿಕ್ ಪಾಂಡ್ಯ (ಭಾರತ)- 222 ರೇಟಿಂಗ್ವನಿಂದು ಹಸರಂಗ (ಶ್ರೀಲಂಕಾ)- 222 ರೇಟಿಂಗ್ಮಾರ್ಕಸ್ ಸ್ಟೋಯಿನಿಸ್ (ಆಸ್ಟ್ರೇಲಿಯಾ)- 211 ರೇಟಿಂಗ್ಸಿಕಂದರ್ ರಾಝ (ಝಿಂಬಾಬ್ವೆ)- 210 ರೇಟಿಂಗ್ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)- 206 ರೇಟಿಂಗ್ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್)- 205 ರೇಟಿಂಗ್ದೀಪೇಂದ್ರ ಸಿಂಗ್ ಅರೀ (ನೇಪಾಳ)- 199 ರೇಟಿಂಗ್ಲಿಯಾಮ್ ಲಿವಿಂಗ್ಸ್ಟೋನ್ (ಇಂಗ್ಲೆಂಡ್)- 187 ರೇಟಿಂಗ್ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 186 ರೇಟಿಂಗ್ಮೊಯೀನ್ ಅಲಿ (ಇಂಗ್ಲೆಂಡ್)- 174 ರೇಟಿಂಗ್