* ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಲಿದ್ದಾರೆ. ಬುಧವಾರ ಚಂಪೈ ಸೊರೇನ್ ಸಿಎಂ ಸ್ಥಾನದಿಂದ ಕೆಳಗಿಳಿದು ಹೇಮಂತ್ ಸೊರೇನ್ಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. * ಅಕ್ರಮ ಹಣ ವ್ಯವಹಾರ ಪ್ರಕರಣ ಆರೋಪದಲ್ಲಿ ಇಡಿಯಿಂದ ಬಂಧನಕ್ಕೊಳಗಾಗುವ ಮುನ್ನ ಹೇಮಂತ್ ಸೊರೇನ್ ತಮ್ಮ ಸಿಎಂ ಸ್ಥಾನವನ್ನು ತೊರೆದಿದ್ದರು.* ರಾಜ್ಯಪಾಲರಿಗೆ ಚಂಪೈ ಸೊರೇನ್ ರಾಜೀನಾಮೆ ಪತ್ರ ನೀಡಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ (Hemant Soren) ಇಲ್ಲಿ ಸರ್ಕಾರ ರಚಿಸಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸುವ ಮೊದಲು ಜನವರಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.* ಹೇಮಂತ್ ಪ್ರಮಾಣ ವಚನ ಸ್ವೀಕರಿಸಿದರೆ ಜಾರ್ಖಂಡ್ ನ 13ನೇ ಮುಖ್ಯಮಂತ್ರಿಯಾಗಲಿದ್ದಾರೆ. ಸುಮಾರು ಐದು ತಿಂಗಳ ಜೈಲಿನಲ್ಲಿ ಕಳೆದ ನಂತರ, ಜಾರ್ಖಂಡ್ ಹೈಕೋರ್ಟ್ ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿದ್ದು ಜೂನ್ 28ರಂದು ಜೈಲಿನಿಂದ ಹೊರಬಂದಿದ್ದರು.* ಚಂಪೈ ಸೊರೆನ್ ಅವರ ಇಂದು ರಾಂಚಿ ನಿವಾಸದಲ್ಲಿ ಆಡಳಿತಾರೂಢ ಮೈತ್ರಿಕೂಟದ ಶಾಸಕರ ನಡುವೆ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಮತ್ತು ರಾಜ್ಯಾಧ್ಯಕ್ಷ ರಾಜೇಶ್ ಠಾಕೂರ್ ಉಪಸ್ಥಿತರಿದ್ದರು. ಇವರಲ್ಲದೆ ಹೇಮಂತ್ ಸೋರೆನ್ ಸಹೋದರ ಬಸಂತ್ ಮತ್ತು ಪತ್ನಿ ಕಲ್ಪನಾ ಕೂಡ ಉಪಸ್ಥಿತರಿದ್ದರು. ಹೇಮಂತ್ ಸೊರೇನ್ ಮತ್ತೆ ಮುಖ್ಯಮಂತ್ರಿಯಾಗಲು ಮತ್ತೆ ಒಪ್ಪಿಗೆ ಸೂಚಿಸಲಾಯಿತು.