* ವಿಶ್ವವಿದ್ಯಾಲಯಗಳ ಉಪಕುಲಪತಿ (ಕುಲಪತಿ) ಹುದ್ದೆಯನ್ನು "ಕುಲಗುರು" ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಧ್ಯಪ್ರದೇಶ ಕ್ಯಾಬಿನೆಟ್ ಜೂನ್ 1 ರಂದು  ಅನುಮೋದನೆ ನೀಡಿದೆ.* ಉಪಕುಲಪತಿ ಹುದ್ದೆಯನ್ನು ಮರುನಾಮಕರಣ ಮಾಡಲು ಸಂಬಂಧಿತ ಕಾಯ್ದೆಗೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.* "ನಾವು ಈ ತಿಂಗಳು ಗುರು ಪೂರ್ಣಿಮೆಯನ್ನು ಆಚರಿಸಲಿರುವುದರಿಂದ ಈ ನಿರ್ಧಾರವು ಮಹತ್ವದ್ದಾಗಿದೆ ಮತ್ತು ಉಪಕುಲಪತಿಗಳನ್ನು ಕುಲಗುರುಗಳು ಎಂದು ಸಂಬೋಧಿಸುವುದು ನಮ್ಮ ಸಂಸ್ಕೃತಿ ಸಂಪ್ರದಾಯಗಳೊಂದಿಗೆ ಹೊಂದಿಕೆಯಾಗುತ್ತದೆ" ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದರು.* ಈ ಪ್ರಸ್ತಾವನೆ ಬಗ್ಗೆ ಹಲವು ರಾಜ್ಯಗಳು ಆಸಕ್ತಿ ತೋರಿದ್ದು, ಪ್ರಸ್ತಾವನೆಯ ಪ್ರತಿಗಳನ್ನು ನೀಡುವಂತೆ ಮನವಿ ಮಾಡಿವೆ. ಇದುವರೆಗೆ ಚಾಲ್ತಿಯಲ್ಲಿದ್ದ ಕುಲಪತಿ ಶಬ್ದವು ಹಲವು ಸಂದರ್ಭದಲ್ಲಿ ಸಮಸ್ಯೆಗೆ ಕಾರಣವಾಗಿತ್ತು. ಅದರಲ್ಲಿಯೂ ಆ ಹುದ್ದೆಯಲ್ಲಿದ್ದ ಮಹಿಳೆಯರಿಗೆ ಮುಜುಗರ ಉಂಟು ಮಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.* ಮಧ್ಯಪ್ರದೇಶ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಇನ್ನು ಮುಂದೆ ಕುಲಗುರುಗಳು ಎಂದು ಕರೆಯಲಾಗುವುದು ಎಂದು ಯಾದವ್ ಹೇಳಿದ್ದಾರೆ.