* ಭಾರತೀಯ ಕುಸ್ತಿಪಟು ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಅವರು ಟೈಮ್ಸ್‌ ನಿಯತಕಾಲಿಕ 2024 ಪ್ರಕಟಿಸಿರುವ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.* ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿರುವ ಇತರ ಭಾರತೀಯರಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಬಾಲಿವುಡ್ ನಟಿ ಅಲಿಯಾ ಭಟ್, ಇಂಡೊ-ಬ್ರಿಟನ್ ನಟ ದೇವ್ ಪಟೇಲ್ ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರು ಸೇರಿದ್ದಾರೆ.* ಅಮೆರಿಕದ ಇಂಧನ ಇಲಾಖೆಯ ಸಾಲ ಕಾರ್ಯಕ್ರಮ ಕಚೇರಿಯ ನಿರ್ದೇಶಕ ಜಿಗರ್ ಶಾ ಅವರು, ಯೇಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರಿಯಂವದಾ ನಟರಾಜನ್ ಅವರು, ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕರಾದ ಅಸ್ಮಾ ಖಾನ್ ಅವರ ಹೆಸರುಗಳು ಅತ್ಯಂತ ಪ್ರಭಾವಿ 100ರ ಪಟ್ಟಿಯಲ್ಲಿವೆ.* ಸಾಕ್ಷಿ ಮಲಿಕ್ ಅವರು ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ವಿರುದ್ಧ ನಿರಂತರ ಹೋರಾಟ ಮಾಡಿದ್ದರು. ಅವರಿಗೆ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತರಾದ ವಿನೇಶಾ ಪೋಗಟ್ ಅವರು ಮತ್ತು ಟೋಕಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಅವರು ಸಾಥ್ ನೀಡಿದ್ದರು.